ಯುವಜನ

ಇನ್‍ಸ್ಟಾಗ್ರಾಂ ಮೂಲಕ ಪ್ರೀತಿಯ ಬಲೆಗೆ ಬಿದ್ದು ಗಂಡನನ್ನು ಬಿಟ್ಟು ಬಂದ ಮಹಿಳೆ ಆತ್ಮಹತ್ಯೆ! 

Views: 318

ಕನ್ನಡ ಕರಾವಳಿ ಸುದ್ದಿ: ಇನ್‍ಸ್ಟಾಗ್ರಾಂ ಮೂಲಕ ಕುರುಡು ಪ್ರೀತಿಗೆ ಮರುಳಾಗಿ ಗಂಡನನ್ನು ಬಿಟ್ಟು ಬಂದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡ ಘಟನೆ ದಾರವಾಡ ನಗರದಲ್ಲಿ ನಡೆದಿದೆ.

ಈ ಸಂಬಂಧ ಧಾರವಾಡ ಉಪನಗರ ಠಾಣೆ ಪೊಲೀಸರು ಪ್ರಿಯಕರನನ್ನು ವಿಜಯ ನಾಯ್ಕರ್‌ನನ್ನು ಬಂಧಿಸಿದ್ದಾರೆ. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಯುವಕ ವಿಜಯ ನಾಯ್ಕರ್‌. ಈತ ರಾಮದುರ್ಗದ ಶ್ವೇತಾ ಗುಡದಾಪುರ ಎಂಬಾಕೆಯನ್ನು ಇನ್‍ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು ನಂತರ ಪ್ರೀತಿಗೆ ತಿರುಗಿತ್ತು.

ಈ ಮೊದಲೇ ಮದುವೆ ಕೂಡ ಆಗಿದ್ದ ಶ್ವೇತಾ, ವಿಜಯ್‌ ಬೀಸಿದ್ದ ಪ್ರೀತಿಯ ಬಲೆಗೆ ಬಿದ್ದೇ ಬಿಟ್ಟಿದ್ದಳು. ಗಂಡನಿಗೂ ಗೊತ್ತಾಗದಂತೆ ಆತನ ಬೆನ್ನು ಹತ್ತಿ ಬಂದು ಧಾರವಾಡದ ಶ್ರೀನಗರ ಬಡಾವಣೆಯ ಬಾಡಿಗೆ ಮನೆಯಲ್ಲಿದ್ದಳು. ವಿಜಯ್‌ ಅಲ್ಲಿಗೆ ಬಂದು ಹೋಗುತ್ತಿದ್ದ ,ಇಬ್ಬರೂ ಮದುವೆ ಕೂಡ ಆಗಬೇಕು ಎಂದುಕೊಂಡಿದ್ದರು. ಆದರೆ ಈ ನಡುವೆ ಶ್ವೇತಾಳನ್ನು ಪತ್ತೆ ಹಚ್ಚಿ ಕರೆದುಕೊಂಡು ಹೋಗಲು ಆಕೆಯ ಪತಿ ಹಾಗೂ ಪಾಲಕರು ಬಂದಿದ್ದಾಗ ಅವರಿಗೆ ರೋಪಿ ವಿಜಯ್‌ ಬೆದರಿಕೆ ಹಾಕಿ ಕಳುಹಿಸಿದ್ದಂತೆ.

ಅದಾದ ಬಳಿಕ ವಿಜಯ್‌ ಹಾಗೂ ಶ್ವೇತಾಳ ಮಧ್ಯೆ ಕಲಹ ಉಂಟಾಗಿತ್ತು ಆತಹತ್ಯೆ ಮಾಡಿಕೊಂಡಿದ್ದಾಳೆ.ತನ್ನ ಕೈಯಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದುಕೊಂಡು ನೇಣಿಗೆ ಶರಣಾಗಿದ್ದಳು. ಆದರೆ ಈ ಸಾವಿಗೆ ವಿಜಯನೇ ಕಾರಣ ಎಂದು ಶ್ವೇತಾ ಮನೆಯವರು ದೂರು ದಾಖಲಿಸಿದ್ದರಿಂದ ಇದೀಗ ಪೊಲೀಸರು ವಿಜಯ್‌ನನ್ನು ಬಂಧಿಸಿದ್ದಾರೆ.

ಶ್ವೇತಾ ಮದುವೆಯಾಗಿದ್ದರೂ ಕೂಡ ಕುರುಡು ಪ್ರೀತಿಗೆ ಬಲಿಯಾಗಿದ್ದಾಳೆ. ವಿಜಯನ ಮಾತು ಕೇಳಿ ಮೊದಲ ಪತಿಗೆ ವಿಚ್ಛೇದನ ನೋಟಿಸ್‌‍ ಕೂಡ ಕಳುಹಿಸಿದ್ದಳು. ಇಷ್ಟೆಲ್ಲ ಬೆಳವಣಿಗೆ ನಂತರ ಕೊನೆಗೆ ತಾನೇ ಇಹಲೋಕ ತ್ಯಜಿಸಿದ್ದಾಳೆ. ಸದ್ಯ ಆರೋಪಿ ವಿಜಯನನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button