ರಾಜಕೀಯ

ಇಡೀ ಕೇಂದ್ರ ಸರ್ಕಾರವೇ ಬಂದು ನಿಂತರು ಸುಧಾಕರ್​ನ​ ಗೆಲ್ಲಲು ಬಿಡಲ್ಲ :ಪ್ರದೀಪ್ ಈಶ್ವರ್‌ ಓಪನ್ ಚಾಲೆಂಜ್

Views: 90

ಬೆಂಗಳೂರು: ಮಾಜಿ ಸಚಿವ ಡಾ. ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಆದ ಬಳಿಕ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ ಅವರು ಓಪನ್ ಚಾಲೆಂಜ್ ಮಾಡಿದ್ದು, ಡಾ.ಕೆ. ಸುಧಾಕರ್ ಗೆಲ್ಲಲು ಬಿಡಲ್ಲ ನಾನು ಎಂದು ಶಪಥ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಮಾತು ಮಾತಿಗೂ ಪಂಚಿಂಗ್ ಡೈಲಾಗ್‌ಗಳನ್ನೇ ಹೊಡೆದರು. ನಿನ್ನೆ ಮಧ್ಯಾಹ್ನ ಪ್ರಜಾಪ್ರಭುತ್ವ ಸಾಯೋದಕ್ಕೆ ಮುನ್ನುಡಿ ಆಗ್ತಾ ಇದೆ ಅನ್ನಿಸಿತು. ಕೋವಿಡ್ ಸಮಯದಲ್ಲಿ ಅವರ ಮೇಲೆ 2200 ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಇದೆ. ಸಾಮಾನ್ಯ ಕೋಚಿಂಗ್ ಸೆಂಟರ್ ಹುಡುಗನ ಮುಂದೆ ಸುಧಾಕರ್ ಸೋತಿದ್ದರು. ಆದರೂ ಹೇಗೆ ಟಿಕೆಟ್ ಸಿಕ್ಕಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ

ಡಾ.ಕೆ ಸುಧಾಕರ್ ಅವರು ಬಿಜೆಪಿ ಪಕ್ಷದ ನಾಯಕರ ಮುಂದೆ ದೀರ್ಘದಂಡ ನಮಸ್ಕಾರ ಮಾಡಿರುವ ಕಾರಣಕ್ಕೆ ಟಿಕೆಟ್ ಸಿಕ್ಕಿರಬಹುದು. ನಾನು ಸಂಪಾದಿಸಿರುವ ನನ್ನ ಆದಾಯ, ಆಸ್ತಿ ಎಲ್ಲವನ್ನೂ ಸಾರ್ವಜನಿಕವಾಗಿ ತೆರೆದಿಡುತ್ತೇನೆ. ನನ್ನ ಆಸ್ತಿ ಎಷ್ಟಿದೆ ಅಂತ ಹೇಳ್ತೀನಿ. ನೀವು ಹೇಳ್ತೀರಾ. ನಾವು ಯಾವುದೇ ಕಾರಣಕ್ಕೂ ಇವರನ್ನ ಪಾರ್ಲಿಮೆಂಟ್ ಮೆಟ್ಟಲು ತುಳಿಯೋದಕ್ಕೆ ಬಿಡೋದಿಲ್ಲ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.

ಇದೇ ವೇಳೆ ಡಾ. ಸುಧಾಕರ್​ಗೆ ಟಿಕೆಟ್​ ನೀಡಿರೋದು ಪ್ರಜಾಪ್ರಭುತ್ವ ಸಾಯೋದಕ್ಕೆ ಮುನ್ನುಡಿಯಾಗಿದೆ. ಚಿಕ್ಕಬಳ್ಳಾಪುರಕ್ಕೆ ಇಡೀ ಕೇಂದ್ರ ಸರ್ಕಾರವೇ ಬಂದು ನಿಂತ್ರೂ ಸುಧಾಕರ್​ನ​ ಗೆಲ್ಲಲು ಬಿಡಲ್ಲ.ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.

Related Articles

Back to top button
error: Content is protected !!