ಇಂದು ಸೂಪರ್ ಮೂನ್

Views: 82
ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತು ಬರುವಾಗ ಕೆಲವೊಂದು ಸಲ ಭೂಮಿಗೆ ಬಹಳ ಹತ್ತಿರದಲ್ಲಿ ಸುತ್ತು ಬರುತ್ತಾನೆ. ಆ ಚಂದ್ರ ತುಂಬಾ ದೊಡ್ಡದಾಗಿ ಕಾಣಿಸುತ್ತಾನೆ. ಚಂದ್ರನ ಬೆಳಕು ಕೂಡ ಜಾಸ್ತಿ ಇರುತ್ತದೆ.
ಪ್ರತಿ ಹುಣ್ಣಿಮೆಯ ಚಂದ್ರನ ಗಾತ್ರಕ್ಕಿಂತ 14 ಪಾಲು ದೊಡ್ಡದಾಗಿರುತ್ತದೆ. ಬೆಳಕು ಕೂಡ 24 ಪಾಲು ಜಾಸ್ತಿ ಇರುತ್ತದೆ. ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ.
ಜುಲೈ 3, ಆಗಸ್ಟ್ 1, ಆಗಸ್ಟ್ 31, ಸೆಪ್ಟೆಂಬರ್ 29 ,ಈ ಎಲ್ಲಾ ಹುಣ್ಣಿಮೆಗಳು ಸೂಪರ್ ಮೂನ್ ಆಗಿ ಕಾಣಿಸಿಕೊಳ್ಳಲಿದೆ.
ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ ಸೂಪರ್ ಮೂನ್ ಗಳಲ್ಲಿ ಮಾಮೂಲಿ ಗಾತ್ರಕ್ಕಿಂತ ದೊಡ್ಡದಾಗಿ ಕಂಡರೆ ಮೈಕ್ರೋ ಮೂನ್ ಗಳು ಚಿಕ್ಕದಾಗಿ ಕಾಣುತ್ತದೆ.
ಸೂಪರ್ ಮೂನ್ ದಿನ ಚಂದ್ರನು ಭೂಮಿಗೆ ಸುಮಾರು ಮೂವತ್ತು ಸಾವಿರ ಕಿಲೋಮೀಟರ್ ಹತ್ತಿರವಿರುದರಿಂದ ಚಂದ್ರನ ಪ್ರಭೆ ಹೆಚ್ಚಿರುತ್ತದೆ.
ಈ ಕಾರಣದಿಂದ ಸಮುದ್ರದ ಭರತ ಇಳಿತಗಳಿಗೆ ಚಂದ್ರನ ಆಕರ್ಷಣೆ ಕಾರಣವಾಗಿತ್ತು ಸಮುದ್ರದ ತೆರೆಗಳ ಅಬ್ಬರ ಹೆಚ್ಚಿರುತ್ತದೆ ಎಂದು ಖಗೋಳಶಾಸ್ತ್ರಜ್ಞ ಡಾ.ಎ .ಪಿ .ಭಟ್ ತಿಳಿಸಿದ್ದಾರೆ.