ಇತರೆ
ಆಸ್ತಿ ವಿವಾದ :ಅಣ್ಣನನ್ನು ಚೂರಿಯಿಂದ ಹತ್ಯೆ ಮಾಡಿದ ತಮ್ಮಂದಿರು

Views: 0
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮಂದಿರೇ ಅಣ್ಣನನ್ನು ಚೂರಿಯಿಂದ ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ನಡೆದಿದೆ.
ಸುಳ್ಯದ ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದವರು.
ಸತ್ತಾರ್, ರಫೀಕ್, ಇಸುಬು, ಅಬ್ಬಾಸ್ ಉಸ್ಮಾನ್ ಸಹೋದರರಾಗಿದ್ದು, ಇವರು ಕುದ್ರೆಪಾಯದಲ್ಲಿ ಸುಮಾರು 50 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಭೂಮಿ ವಿವಾದದ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ಎರ್ಪಟ್ಟಿತ್ತು. ಉಳಿದ ಸಹೋದರರೆಲ್ಲರೂ ಸೇರಿ ಉಸ್ಮಾನ್ ಎಂಬುವರನ್ನು ಚೂರಿಯಿಂದ ಕೊಲೆ ಮಾಡಿದ್ದಾರೆ, ಕೊಡಗು ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.