ಧಾರ್ಮಿಕ
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀರಾಮ ಪ್ರತಿಷ್ಠಾನೆ ಪ್ರಯುಕ್ತ ವಿಶೇಷ ಕಾರ್ಯಕ್ರಮ

Views: 184
ಕುಂದಾಪುರ: ಅಯೋಧ್ಯೆ ಶ್ರೀ ರಾಮ ಪ್ರತಿಷ್ಠೆ ಅಂಗವಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ವಿಶೇಷ ಅಲಂಕಾರ,ಮಹಾಪೂಜೆ ನಡೆಯಿತು.
ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮ ದೇವರ ಮೂರ್ತಿ ಹಾಗೂ ಶ್ರೀರಾಮ ದೇವರಿಗೆ ಆನೆಗುಡ್ಡೆಯಲ್ಲಿ ವಿಶೇಷ ಪೂಜೆ ನಡೆಯಿತು.ತದನಂತರ ಬೆಳ್ಳಿ ರಥೋತ್ಸವ ನಡೆಸಲಾಯಿತು.
ದೇಗುಲದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಪಯಾಯ ಅರ್ಚಕ ಶ್ರೀಶ ಉಪಾಧ್ಯಾಯ, ಮೊಕ್ತೇಸರರಾದ ಕೆ ನಿರಂಜನ ಉಪಾಧ್ಯಾಯ, ಮ್ಯಾನೇಜರ್ ನಟೇಶ್ ಕಾರಂತ್,ಪುರೋಹಿತ ರೋಹಿತಾಕ್ಷ ಆಚಾರ್ಯ, ರಥಶಿಲ್ಪಿಗಳಾದ ಲಕ್ಷ್ಮೀ ನಾರಾಯಣ ಆಚಾರ್ಯ, ರಾಜಗೋಪಾಲ್ ಆಚಾರ್ಯ ಶ್ರೀ ಕೃಷ್ಣದೇವ ಕಾರಂತ್, ಪರಿಸರ ಪ್ರೇಮಿ ವಿಠ್ಠಲ್ ಶೆಟ್ಟಿ ,ಆಡಳಿತ ಮಂಡಳಿಯ ಸದಸ್ಯರು ಅರ್ಚಕ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.