ಅ.27 ರಿಂದ 29ರವರೆಗೆ ಶೆಟ್ಟಿಗಾರ್ ಇಂಡಸ್ಟ್ರೀಸ್ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Views: 80
ಕನ್ನಡ ಕರಾವಳಿ ಸುದ್ದಿ: ಬಾರ್ಕೂರು ರಂಗನಕೇರಿ ಶೆಟ್ಟಿಗಾರ್ ಇಂಡಸ್ಟ್ರೀಸ್ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದಿನಾಂಕ 27.08.2025ನೇ ಬುಧವಾರದಿಂದ ದಿನಾಂಕ 29.08.2025ನೇ ಶುಕ್ರವಾರ ಪರ್ಯಂತ ಭಕ್ತ ಜನರ ಸಹಕಾರದೊಂದಿಗೆ ವೇದಮೂರ್ತಿ ಎನ್. ರಮೇಶ ಭಟ್ ನಾಯರ್‌ಬೆಟ್ಟು ಇವರ ಪೌರೋಹಿತ್ಯದಲ್ಲಿ ನಡೆಯಲಿದೆ.
ಕಾರ್ಯಕ್ರಮಗಳು
ದಿನಾಂಕ : 27.08.2025ನೇ ಬುಧವಾರ ಪೂರ್ವಾಹ್ನ ಗಂಟೆ 10.20ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠಾಪನೆ,
ಪೂರ್ವಾಹ್ನ ಗಂಟೆ 10.30ರಿಂದ ಸಂಜೆ ಗಂಟೆ 6.30ರವರೆಗೆ ಭಜನೆ
ಮಧ್ಯಾಹ್ನ ಗಂಟೆ 12.30ರಿಂದ : ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆ.
ಸಂಜೆ ಗಂಟೆ 6.30ರಿಂದ : ರಂಗಪೂಜೆ, ಪ್ರಸಾದ ವಿತರಣೆ.
ಸಮಯ: ರಾತ್ರಿ ಗಂಟೆ 7.15ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ಗಿಚ್ಚಿ-ಗಿಲಿಗಿಲಿ ಖ್ಯಾತಿಯ ದೀಕ್ಷಾ ಬ್ರಹ್ಮಾವರ, ಅಭಿನಯದ ಸಾಮಾಜಿಕ ನಗೆ ನಾಟಕ “ಇವತ್ತಲ್ಲ ನಾಳೆ”
ದಿನಾಂಕ 28.08.2025ನೇ ಗುರುವಾರ ಪೂರ್ವಾಹ್ನ ಗಂಟೆ 9 ರಿಂದ ಗಣಹೋಮ, ಮಹಾಪೂಜೆ, ಮಹಾಮಂಗಳಾರತಿ.
ಮಧ್ಯಾಹ್ನ 12:30 ರಿಂದ ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಭಜನೆ, ಸಂಜೆ ಗಂಟೆ 6ರಿಂದ ರಂಗ ಪೂಜೆ, ಸಂಜೆ 7 ರಿಂದ ಅಕ್ಷತಾ ಮೆಲೋಡಿಸ್ ಹೇರಾಡಿ ಬಾರಕೂರು ಇವರಿಂದ “ಸಂಗೀತ ರಸಮಂಜರಿ”
ರಾತ್ರಿ ಗಂಟೆ 8:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ
ಅಧ್ಯಕ್ಷತೆ: ಶ್ರೀ ಬಿ ಉಮೇಶ್ ಆಚಾರ್ಯ, ಬಾರ್ಕೂರು
ಉದ್ಘಾಟನೆ: ಶ್ರೀ ಆನಂದ್ ಸಿ.ಕುಂದರ್ ಪ್ರವರ್ತಕರು ಗೀತಾನಂದ ಫೌಂಡೇಶನ್, ಕೋಟ
ಅತಿಥಿಗಳು: ಶ್ರೀ ಎ ವಿ ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳ,
ಶ್ರೀ ಬಿ ಶಾಂತರಾಮ ಶೆಟ್ಟಿ ಅಧ್ಯಕ್ಷರು ಉತ್ಸವ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬಾರ್ಕೂರು.
ಶ್ರೀ ಗೋಪಿನಾಥ್ ಕಾಮತ್ ಚಿತಾರ ಕ್ಯಾಶ್ಯೂಸ್ ಸಮೂಹ ಸಂಸ್ಥೆಗಳು, ವಂಡಾರು.
ಶ್ರೀ ರವಿ ಶೆಟ್ಟಿಗಾರ್ ಅಧ್ಯಕ್ಷರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಮಂಗಳೂರು.
ಶ್ರೀ ಪ್ರಮೋದ್ ಮಂದಾರ್ತಿ, ನಮಸ್ತೆ ಭಾರತ ಟ್ರಸ್ಟ್ ಮಂದಾರ್ತಿ
ಸನ್ಮಾನ
ಶ್ರೀ ಈಶ್ವರ ಮಲ್ಪೆ ಸಮಾಜ ಸೇವಕರು ಹಾಗೂ ಮುಳುಗು ತಜ್ಞರು.
ಶ್ರೀಮತಿ ತನುಲಾ ತರುಣ್ ಹೊಸ ಬೆಳಕು ಸೇವಾ ಟ್ರಸ್ಟ್ ಕೌಡೂರು,ಬೈಲೂರು.
ಅಭಿನಂದನೆ
ಶ್ರೀ ಹಿರಿಯಣ್ಣ ಶೆಟ್ಟಿಗಾರ್ ಮಂದಾರ್ತಿ “ಭಾರತೀಯ ಯಕ್ಷಗಾನ ರತ್ನ” ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.
ಶ್ರೀ ವಿವೇಕಾನಂದ ಶೆಟ್ಟಿಗಾರ್ ಬಸ್ರೂರು ‘ಕರುನಾಡ ಕಲ್ಪವೃಕ್ಷ’ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರು.
ಶ್ರೀ ಉದಯ ಕುಮಾರ್ ಹೊಸಾಳ, ಭಾಗವತರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ಶ್ರೀ ಸುಧಾಕರ್ ವಕ್ವಾಡಿ, ಸಂಪಾದಕರು “ಕನ್ನಡ ಕರಾವಳಿ”
ಶ್ರೀ ರಾಜೇಶ್ ಶ್ಯಾನುಭೋಗ್ ಬಾರಕೂರು. ಖ್ಯಾತ ಗಾಯಕರು, ನಿರೂಪಕರು, ಯುಟ್ಯೂಬ್ ಕ್ರಿಯೇಟರ್, ಸಂಗೀತ ಶಿಕ್ಷಕರು.
ಶ್ರೀ ಆನಂದ್ ಕುಮಾರ್ ಬಾರಕೂರು.ನಮ್ಮೂರು ಬಾರಕೂರು ಫೇಸ್‌ಬುಕ್ ಕಾರ್ಯ ನಿರ್ವಾಹಕರು.
ರಾತ್ರಿ ಗಂಟೆ 9:30ರಿಂದ ನಾಟಕ ಮೂಡುಬಿದಿರೆ ಕಲಾ ಕೂಟ ತಂಡದವರಿಂದ ಕುರಾಲ್ ಕಲಾವಿದೆರ್ ಬೆದ್ರ ಇವರಿಂದ ಹಾಸ್ಯಮಯ ನಾಟಕ “ತೀರ್ಥ“
ದಿನಾಂಕ : 29.08.2025ನೇ ಶುಕ್ರವಾರ
ಪೂರ್ವಾಹ್ನ ಗಂಟೆ 9.00ರಿಂದ : 108 ಕಾಯಿ ಗಣಯಾಗ, ಮಹಾಪೂಜೆ
ಮಧ್ಯಾಹ್ನ ಗಂಟೆ 12.00ರಿಂದ : ಪ್ರಸಾದ ವಿತರಣೆ
ಮಧ್ಯಾಹ್ನ ಗಂಟೆ 12.30ರಿಂದ : ಮಹಾ ಅನ್ನಸಂತರ್ಪಣೆ
ಮಧ್ಯಾಹ್ನ ಗಂಟೆ 12.30ರಿಂದ : ಟೀಮ್ ಗಾನಾಮೃತ ಬಾರಕೂರು ಇವರಿಂದ “ಸಂಗೀತ ರಸಮಂಜರಿ”
ಅಪರಾಹ್ನ ಗಂಟೆ 4.30ರಿಂದ : ಗಣಪತಿ ವಿಸರ್ಜನಾ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ವಿಸರ್ಜನಾ ಮೆರವಣಿಗೆ, ಜಲಸ್ತಂಭನ.
ಶೆಟ್ಟಿಗಾರ್ ಇಂಡಸ್ಟ್ರೀಸ್‌ನಿಂದ ವಾಹನಗಳ ಮೂಲಕ ಶ್ರೀ ಬಟ್ಟೆವಿನಾಯಕ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ 5:30 ಗಂಟೆಗೆ ಪುರ ಮೆರವಣಿಗೆ ಹೊರಟು ರಂಗನಕೇರಿಯ ಶ್ರೀ ರತ್ನಗರ್ಭಗಣಪತಿ ದೇವಾಲಯದ ಕೆರೆಯಲ್ಲಿ ವಿಸರ್ಜನೆ.
ಕೆರೆ ಉತ್ಸವ ಮತ್ತು ಜಲಸ್ತಂಭನ ಸಹಕಾರ ಮೊಗವೀರ ಯುವಕ ಸಂಘ, ಬೆಣ್ಣೆಕುದ್ರು, ಬಾರಕೂರು
ಮೆರವಣಿಗೆಯ ವಿಶೇಷ ಆಕರ್ಷಣೆ


ಕೀಲು ಕುದುರೆ, ಗೊಂಬೆ ಕುಣಿತ (ಪ್ರಭು ಇವೆಂಟ್ ಕಟಪಾಡಿ) ಆಕರ್ಷಕ ಟ್ಯಾಬ್ಲೊಗಳು ಹಾಗೂ ವಿವಿಧ ತಂಡಗಳಿಂದ ಅದ್ಧೂರಿ ಕುಣಿತ ಭಜನೆ
ಶ್ರೀ ಗಣಪತಿ ಟ್ಯಾಬ್ಲೋ ಹಾಗೂ ವಿಗ್ರಹದ ಕೊಡುಗೆ ಶ್ರೀಮತಿ ಯಶೋಧ ಶ್ರೀನಿವಾಸ ಶೆಟ್ಟಿಗಾರ ರಂಗನಕೇರಿ ಬಾರಕೂರು.
ಗಣೇಶ್ ಉತ್ಸವದ ವಿವಿಧ ಕೆಲಸ ಕಾರ್ಯಗಳಿಗೆ ರೂ.2,00.000/ ವನ್ನು ಗೌರವಾಧ್ಯಕ್ಷರಾದ ಶ್ರೀ ಬಿ ಶ್ರೀನಿವಾಸ ಶೆಟ್ಟಿಗಾರ್ ಇವರು ಪ್ರತ್ಯೇಕವಾಗಿ ನೀಡಿರುತ್ತಾರೆ.
ಕಳೆದ 19 ವರ್ಷಗಳಿಂದ ನಮ್ಮ ಯಶಸ್ಸಿನಲ್ಲಿ ಭಾಗಿಗಳಾದ ನಮ್ಮ ಎಲ್ಲಾ ಹಿತೈಷಿಗಳಿಗೂ ಹಾಗೂ ತನು ಮನ ಧನ ಸಹಕಾರಗಳನ್ನಿತ್ತು. ಸದಾ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಮಹನೀಯರೆಲ್ಲರಿಗೂ ಹಾಗೂ ಕಾರ್ಯಕ್ರಮಗಳಿಗೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು ಮತ್ತು ಸರ್ವರನ್ನು ಸ್ವಾಗತಿಸುವ,
ಬಿ ಶ್ರೀನಿವಾಸ್ ಶೆಟ್ಟಿಗಾರ್ ಗೌರವಾಧ್ಯಕ್ಷರು
ಬಿ. ಉಮೇಶ್ ಆಚಾರ್ಯ ಅಧ್ಯಕ್ಷರು
ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ರಂಗನಕೇರಿ ಬಾರಕೂರು






