ಇತರೆ

ಅಳಿಯ-ಮಗಳ ಜಗಳ: ಬಿಡಿಸಲು ಹೋದ ಅತ್ತೆ ಕೊಲೆಯಲ್ಲಿ ಅಂತ್ಯ 

Views: 57

ತುಮಕೂರು: ಅಳಿಯ-ಮಗಳ ಜಗಳ ಬಿಡಿಸಲು ಹೋಗಿ ಅತ್ತೆ ಕೊಲೆಯಾದ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.

ಅತ್ತೆ ಅಶ್ವಿತ್ ಉನ್ನಿಸಾ (58) ಕೊಲೆಯಲ್ಲಿ ಅಂತ್ಯ ಕಂಡವರು.

ಅಶ್ವಿತ್ ಉನ್ನಿಸಾ ತುಮಕೂರು ತಾಲೂಕಿನ ಬೆಳಗುಂಬ ನಿವಾಸಿಯಾಗಿದ್ದರು. ಇವರು ತಮ್ಮ ಮಗಳನ್ನು ಕೊಡಿಗೇನಹಳ್ಳಿ ನಿವಾಸಿ ಸೈಯದ್ ಸುಹೇಲ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು. ಕೌಟುಂಬಿಕ ಕಲಹದಿಂದ ಪ್ರತಿದಿನ ಅಳಿಯ ಮಗಳು ಜಗಳ ಮಾಡಿಕೊಳ್ಳುತ್ತಿದ್ದರು. ಅಂತೆಯೇ ಮೊನ್ನೆಯ ದಿನ ಜಗಳ ವಿಕೋಪಕ್ಕೆ ತಿರುಗಿತ್ತು. ಹೀಗಾಗಿ ಅಮ್ಮನನ್ನು ಮಗಳು ಫೋನ್ ಮಾಡಿ ಗಂಡನ ಮನೆಗೆ ಕರೆಸಿಕೊಂಡಿದ್ದಳು. ಅಳಿಯ-ಮಗಳ ಜಗಳ ಬಿಡಿಸಲು ಹೋದ ವೇಳೆ ಅಶ್ವಿತ್ ಉನ್ನಿಸಾ ತಲೆಗೆ ಅಳಿಯ ದೊಣ್ಣೆಯಿಂದ ಹೊಡೆದಿದ್ದಾನೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಶ್ವಿತ್ ಉನ್ನಿಸಾಳನ್ನ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಶ್ವಿತ್ ಉನ್ನಿಸಾ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Back to top button