ಶಿಕ್ಷಣ

PUC ವಿದ್ಯಾರ್ಥಿಗಳಿಗೆ IITಯಿಂದ ಬಹು ಉಪಯೋಗಿ ಕೋರ್ಸ್ ಆರಂಭ 

Views: 78

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಮದ್ರಾಸ್, ಶಾಲಾ ವಿದ್ಯಾರ್ಥಿಗಳಿಗೆ 2 ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮ ಆಯೋಜನೆ ಮಾಡಿದೆ.

ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌, ಎಲೆಕ್ಟ್ರಾನಿಕ್ ಸಿಸ್ಟಮ್‌ಗಳ ಬಗೆಗಿನ ಮಾಹಿತಿ ಒಳಗೊಂಡಿರುತ್ತದೆ. ಅರ್ಹ  ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.

ಇದು 8 ವಾರಗಳು ಅಂದರೆ 2 ತಿಂಗಳುಗಳ ಕಾಲ ಪ್ರಮಾಣೀಕರಣ ಕೋರ್ಸ್‌ ಆಗಿರುತ್ತದೆ. ವಿದ್ಯಾರ್ಥಿಗಳ ಜೀವನಕ್ಕೆ ಉಪಯೋಗವಾಗುಂತಹ ಅತ್ಯಂತ ಪ್ರಮುಖ ಮಾಹಿತಿ ಒದಗಿಸುತ್ತದೆ. ವಿದ್ಯಾರ್ಥಿಗಳು ಸಂಪರ್ಕ ಮಾಡಿ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.

2 ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮಕ್ಕೆ ತಲಾ 500 ರೂ. ಶುಲ್ಕ ಇರುತ್ತದೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ

ಡಾಟಾ ಸೈನ್ಸ್ ಹಾಗೂ ಎಐ- ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನ್ವಯ

ಎಲೆಕ್ಟ್ರಾನಿಕ್ ಸಿಸ್ಟಮ್‌ಗಳ- 11, 12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ ಅಧ್ಯಯನ ಮಾಡಿರಬೇಕು

ಕೋರ್ಸ್ ವಿವರ 

30 ನಿಮಿಷಗಳ ಕೋರ್ಸ್ ಬಗ್ಗೆ ರೆಕಾರ್ಡ್ ಮಾಡಿದ ಉಪನ್ಯಾಸ ವೀಡಿಯೊಗಳು ಒಳಗೊಂಡಿದೆ

1 ಗಂಟೆ ಸಾಪ್ತಾಹಿಕ ವಿಷಯ ಅವಧಿಯೊಂದಿಗೆ ಪ್ರತಿ ಸೋಮವಾರ ವಿಡಿಯೋ ಅಪ್ಲೋಡ್ ಮಾಡಲಾಗುತ್ತದೆ

ಆ ವಾರದಲ್ಲಿ ಯಾವ ದಿನವಾದರೂ ವಿದ್ಯಾರ್ಥಿಗಳು ವಿಡಿಯೋವನ್ನು ನೋಡಬಹುದು

ತಿಂಗಳಿಗೊಮ್ಮೆ ವಾರಾಂತ್ಯದಲ್ಲಿ ನೇರ ಸಂವಾದಾತ್ಮಕ ( live interactive) ಸೆಷನ್‌ ಇರುತ್ತದೆ

ಪ್ರತಿ 2 ವಾರಗಳಿಗೊಮ್ಮೆ ಆನ್‌ಲೈನ್ ಅಸೈನ್ಮೆಂಟ್ ನೀಡಲಾಗುತ್ತೆ. 2 ವಾರಗಳ ಒಳಗೆ ವಿದ್ಯಾರ್ಥಿಗಳು ಸಲ್ಲಿಸಬೇಕು

ಕೋರ್ಸ್‌ಗಳು: ಪಾಲುದಾರ ಶಾಲೆಗಳನ್ನು ಪರಿಶೀಲಿಸಲು ಕ್ರಮಗಳು

ಅಧಿಕೃತ ವೆಬ್‌ಸೈಟ್‌ಗೆ ಹೋಗಿ, school-connect.study.iitm.ac.inStep

ಹೋಮ್ಪೇಜ್ ಕ್ಲಿಕ್ ಮಾಡಿ, ಪಾಲುದಾರ ಶಾಲೆಗಳ ಸ್ಟೆಪ್ ಫಾಲೋ ಮಾಡಿ

ಒಂದು ಹೊಸ ಪೇಜ್ ಓಪನ್ ಆಗುತ್ತೆ, ಅದರಲ್ಲಿ ನಿಮ್ಮ ಶಾಲೆ ಹೆಸರು ಹುಡುಕಿ

Ctrl + F ಪ್ರಸ್ ಮಾಡುವ ಮೂಲಕ ನಿಮ್ಮ ಶಾಲೆ ಹುಡುಕಬಹುದು

ವೇಳಾಪಟ್ಟಿ

ರಿಜಿಸ್ಟ್ರೇಷನ್ ಕೊನೆಯ ದಿನಾಂಕ- ಅಕ್ಟೋಬರ್ 4, 2024

ಪಾಲುದಾರ ಶಾಲೆಗಳ ರಿಜಿಸ್ಟ್ರೇಷನ್ ಕೊನೆಯ ದಿನಾಂಕ- ಸೆ.30

ಕಾರ್ಯಕ್ರಮ ಆರಂಭದ ದಿನಾಂಕ- ಅಕ್ಟೋಬರ್ 21, 2024

Related Articles

Back to top button