ರಾಜಕೀಯ

NDA ಜೊತೆ JDS ಮೈತ್ರಿ ಜಾತ್ಯಾತೀತ ಸಿದ್ಧಾಂತಕ್ಕೆ ಧಕ್ಕೆ : ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಶೈಫುಲ್ಲಾ ರಾಜೀನಾಮೆ

Views: 0

ಜೆಡಿಎಸ್‌–ಎನ್‌ಡಿಎ ಜೊತೆ ಮೈತ್ರಿ ಘೋಷಣೆ ಬೆನ್ನಲ್ಲೇ ಜೆಡಿಎಸ್ ಒಳಗಡೆ ರಾಜೀನಾಮೆ ಪರ್ವ ಆರಂಭವಾಗಿತ್ತು. ಇದೀಗ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತು ಪಕ್ಷದ ಸದಸ್ಯತ್ವಕ್ಕೆ ಸೈಯದ್ ಶೈಫುಲ್ಲಾ ಅವರು ರಾಜೀನಾಮೆ ನೀಡಿದ್ದಾರೆ.

ಮುಂಬರುವ 2024ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶೈಫುಲ್ಲಾ, ಜಾತಿ-ಸಮುದಾಯಗಳ ನಡುವೆ ಬಿರುಕು ಮೂಡಿಸುವ ಪಕ್ಷದ ಜೊತೆ ಜೆಡಿಎಸ್ ಸೇರಿದೆ. ಕಳೆದ 30 ವರ್ಷಗಳಿಂದ ಪಕ್ಷದೊಂದಿಗೆ ಇದ್ದೆ, ನಮ್ಮ ಪಕ್ಷ ಜಾತ್ಯತೀತ ನೆಲೆಗಟ್ಟಿನ ಮೇಲೆ ನಿಂತಿದೆ ಮತ್ತು ನಾವು ಯಾವಾಗಲೂ ಆ ತತ್ವಗಳನ್ನು ಪ್ರಚಾರ ಮಾಡಿದ್ದೇವೆ. ಈಗ ನಮ್ಮ ಪಕ್ಷವು ಸಮುದಾಯಗಳು ಮತ್ತು ಜಾತಿಗಳ ನಡುವೆ ಬಿರುಕು ಮೂಡಿಸುವ ಪಕ್ಷದೊಂದಿಗೆ ಕೈಜೋಡಿಸುತ್ತಿದ್ದರೆ ನಾವು ಜಾತ್ಯತೀತ ನಾಯಕರು ಅದನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಶೈಫುಲ್ಲಾ, ಇದು ನಮ್ಮ ದೇಶ ಪ್ರಗತಿಯ ಹಾದಿ ಅಲ್ಲ, ಜನರ ನಡುವೆ ಬಿರುಕು ಮೂಡಿಸುವ ಬಿಜೆಪಿಯನ್ನು ಜಾತ್ಯತೀತ ಶಕ್ತಿಗಳು ಒಪ್ಪುವುದಿಲ್ಲ. ನಮಗೆ ಬಿಜೆಪಿ ಜೊತೆಗಿನ ಹೊಂದಾಣಿಕೆ ಕಷ್ಟ ಎಂದು ಅವರು ಹೇಳಿದ್ದಾರೆ.

Related Articles

Back to top button
error: Content is protected !!