ಜನಮನ

ಮಗ್ಗದ ಮೇಸ್ಟ್ರು

Views: 3

ಗಾಂಧೀಜಿ ಸ್ವದೇಶಿ ಚಳುವಳಿ ಪ್ರೇರಣೆ,  “ಮಗ್ಗದಮೇಸ್ಟ್ರು” ಗೋಪಾಲಶೆಟ್ಟಿಗಾರ ಶಂಕರನಾರಾಯಣ.                    ನಿತ್ಯ ಜೀವನದಲ್ಲಿ ಕೈಮಗ್ಗದ ಉತ್ಪನ್ನಗಳನ್ನು ಬಳಸುವ ಮೂಲಕ ವಿದೇಶಿ ಉತ್ಪನ್ನ ಬಟ್ಟೆಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನ ಬಟ್ಟೆಗಳನ್ನು ಬಳಸುವ ಗಾಂಧೀಜಿ  ಸ್ವದೇಶಿ ಚಳುವಳಿಯಿಂದ ಶಾಲಾ ಜೀವನದಲ್ಲಿ ಪ್ರೇರಣೆಗೆ ಒಳಗಾಗಿ ಸ್ವಾವಲಂಬಿ ಜೀವನದ ಕನಸು ಕಂಡ ಪ್ರಸ್ತುತ ಕುಂದಾಪುರ ತಾಲೂಕಿನ ಶಂಕರನಾರಾಯಣದ ನಿವಾಸಿ ಮಗ್ಗದಮೇಸ್ಟ್ರು ಗೋಪಾಲಶೆಟ್ಟಿಗಾರರು 1930 ರಲ್ಲಿಉಡುಪಿ ತಾಲೂಕಿನ ಚೇಕಾ೯ಡಿಯಲ್ಲಿ ಜನಿಸಿದರು. ಇವರಿಗೆ ಪತ್ನಿ ರುಕ್ಮಿಣಿ, ಐವರು ಪುತ್ರರರು ಏಕೈಕ ಪುತ್ರಿ ಇದ್ದಾರೆ.  ಆರಂಭಿಕ ಶಿಕ್ಷಣವನ್ನು ಚೇಕಾ೯ಡಿ ಪ್ರಾಥಮಿಕ ಶಾಲೆ, ಬೃಹ್ಮಾವರ ಸರಕಾರಿ ಶಾಲೆಯಲ್ಲಿ ಓದುತ್ತಿರುವಾಗ ಹೆಚ್ಚಿನ ವ್ಯಾಸಂಗಕ್ಕಾಗಿ ದ. ಕ ಜಿಲ್ಲಾ ಪದ್ಮಶಾಲಿ ಸದಸ್ಯತ್ವ ಪಡೆದು ಅವರು ನೀಡಿದ 30 ರೂಪಾಯಿ ಸ್ಕಾಲರ್‌ ಶಿಪ್ಪ ಪಡೆದು ವ್ಯಾಸಂಗ ಮಾಡುತ್ತಿರುವಾಗಲೇ ನೇಯ್ಗೆ ಶಿಕ್ಷಕರಾಗಿ ನೇಮಕಗೊಂಡರು. ಅಲ್ಲಿಂದ ಆಂಧ್ರಪ್ರದೇಶದ ಮದ್ರಾಸ್ಗೆ ಹೋಗಿ ತೆಲುಗುಭಾಷೆಯನ್ನು ಓದಲು ಬರೆಯಲು ಅಭ್ಯಾಸಮಾಡಿ ಕೊಂಡು ಕೈಮಗ್ಗ ತರಬೇತಿ ಸಂಸ್ಥೆಗೆ ಸೇರಿ ಒಂದು ವಷ೯ದ ನೇಯ್ಗೆ ತರಬೇತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾಗಿ ಕಾಕ೯ಳದ ನೀರೆಬೈಲೂರು ಸರಕಾರಿ ಪ್ರೌಢಶಾಲೆಯಲ್ಲಿ ಖಾಯಂ ಶಿಕ್ಷಕರಾಗಿ ನಾಲ್ಕು ವಷ೯ಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.  ಆವಾಗ ಪ್ರೌಢಶಾಲೆಯಲ್ಲಿ ಹುರಿಹಗ್ಗ ತಯಾರಿ, ಹೊಲಿಗೆ, ಪಾದರಕ್ಷೆ ತಯಾರಿ, ಕೈಮಗ್ಗ, ಗುಡಿಕೈಗಾರಿಕೆಗೆ ತರಬೇತಿ ನೀಡುವ ಶಾಲೆಗಳಿದ್ದವು. ಇವರಿಗೆ ವಗಾ೯ವಣಿ ಆದೇಶ ಬಂದಾಗ ಕೈಮಗ್ಗ ಹೊಂದಿರುವ ತೆಕ್ಕಟ್ಟೆ, ಬೃಹ್ಮಾವರ, ಶಂಕರನಾರಾಯಣ ಶಾಲೆಗಳಲ್ಲಿ ಶಂಕರನಾರಾಯಣ ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡು 27 ವಷ೯ಗಳ ಕಾಲ ನೆಯ್ಗೆ ಶಿಕ್ಷಕರಾಗಿ ಸಾಥ೯ಕ ಸೇವೆ ಸಲ್ಲಿಸಿ 1988 ರಲ್ಲಿನಿವೃತ್ತರಾದರು. ನೆಯ್ಗೆಯಿಂದ ಮಗ್ಗದ ಮೇಸ್ಟ್ರು :

ಹಿಂದೆ ಶಾಲೆಗಳಲ್ಲಿ ಉದ್ಯೋಗ ಆಧರಿತ ಸ್ವಾವಲಂಬಿ ಜೀವನಕ್ಕೆ ದಾರಿ ತೋರಿ ಜೀವನ ನಿವ೯ಹಿಸುವ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇದ್ದಿತ್ತು. ಇವರು ಶಾಲೆಯಲ್ಲಿ ಕೈಮಗ್ಗದಿಂದ ಬಟ್ಟೆ ತಯಾರಿ ಬಗ್ಗೆ ಅದೆಷ್ಟೋ ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜೀವನ ಕಟ್ಟಿ ಕೊಟ್ಟಿದ್ದಾರೆ. ಮನೆಯಲ್ಲಿಯೂ 3-4 ಕೈಮಗ್ಗ ಇಟ್ಟುಕೊಂಡು ಯಾವುದೇ ಧಮ೯ಜಾತಿ ಬೇಧವಿಲ್ಲದೆ ತರಬೇತಿ ಪಡೆದಿರುತ್ತಾರೆ.  ನಂತರ ತಾಂತ್ರಿಕ ಪರೀಕ್ಷೆಯಲ್ಲಿಉತ್ತೀರ್ಣಗೊಂಡು ನೇಯ್ಗೆ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಾರೆ. ಹೀಗೆ ಇವರಿಂದ ನೇಕಾರಿಕೆ ತರಬೇತಿ ಪಡೆದ ಶಿಷ್ಯರಿಗೆ ನೇಯ್ಗೆ ಮಾಸ್ಟ್ರು  ‘ಮಗ್ಗದಮೇಸ್ಟ್ರು ‘ಎಂದೇ ಜನಮಾನಸದಲ್ಲಿ ಚಿರಪರಿಚಿತರಾದರು.

ಮಗ್ಗದ ಮಾಸ್ಟ್ರ.. ಮಲ್ಲಿಗೆ ತೋಟದೊಳಗೆ…!  :

ಇವರು ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿ ಖರೀದಿಸಿದ 77 ಸೆಂಟ್ಸ್ಜಾಜಾಗದಲ್ಲಿ ಮಲ್ಲಿಗೆಯೇ ಪ್ರಧಾನ ಕೃಷಿಯನ್ನಾಗಿಸಿ ಕೊಂಡ ತೋಟದಲ್ಲಿ ಜಾಜಿ, ಮುತ್ತುಮಲ್ಲಿಗೆ, ಕಾಕಡ, ಸಂಪಿಗೆ, ಗುಲಾಬಿ, ದಾಸವಾಳ, ಕನಕಾಂಬರ, ಮದುವೆಹಾರಕ್ಕೆ ಬೇಕಾಗಿರುವ ಉದ್ದನೆಯ ಎಲೆಗಿಡಗಳನ್ನುಬೆಳೆಯುತ್ತಾರೆ.  ಆವಾಗ ಎಲೆಯ ಮದುವೆ ಹಾರಕ್ಕೆ ಹೆಚ್ಚಿನ ಬೇಡಿಕೆ ಇದ್ದಿದ್ದರಿಂದ ಇವರನ್ನು ದೂರದೂರದ ಊರಿನಿಂದ ಬರುತ್ತಿದ್ದರು. ಮಲ್ಲಿಗೆಕೃಷಿಯಬಗ್ಗೆ 2-3 ಬಾರಿ ಮಂಗಳೂರು ಆಕಾಶವಾಣಿಯಲ್ಲಿ ತರಬೇತಿ ನೀಡಿದ್ದಾರೆ.       ಮಗ್ಗದ ಮಾಸ್ಟ್ರಿಗೆ ಆರು ಜನ ಮಕ್ಕಳ ಪೈಕಿ ಹಿರಿಯಪುತ್ರ ಪುರುಷೋತ್ತಮ ಶೆಟ್ಟಿಗಾರ ಉಪನ್ಯಾಸಕ ವೃತ್ತಿಯೊಂದಿಗೆ ಬಾರಕೂರು ಬೃಹ್ಮಲಿಂಗ ವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಳದಲ್ಲಿ ಅಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು.  ಇನ್ನಿಬ್ಬರು ಬುದ್ಧಿಮಾಂದ್ಯರು ಅವರಿಗೆ ಅಲ್ಪ ಸ್ವಲ್ಪ ವಿದ್ಯೆ ನೀಡಿದನಂತರ ಅವರ ಬದುಕು ಬೀದಿಪಾಲಾಗ ಬಾರದು, ಎಂದುತಿಳಿದು, ಹೇಳಿ ಕೊಟ್ಟ ಸರಳ ಕೆಲಸವನ್ನು ಮಾಡಬಲ್ಲರು ಕೈಮಗ್ಗ ದಂತಹ ಕುಶಲ ಕೆಲಸವನ್ನು ನಿವ೯ಹಿಸಲು ಅವರಿಂದ ಸಾದ್ಯವಿಲ್ಲ ಸ್ವಾವಲಂಬಿ ಹೂವಿನ ಬೇಸಾಯದಿಂದ ಸಾದ್ಯ ಎಂದು ತಿಳಿದು ಆ ಕೆಲಸ ನೀಡಲಾಯಿತು.  ಇಬ್ಬರು ಮಕ್ಕಳು ಕೊಟ್ಟ ಲಸವನ್ನು ಕಾಯಾವಾಚದಿಂದ ಸಮಥ೯ವಾಗಿ ತೊಡಗಿಸಿಕೊಂಡು ನೆಮ್ಮದಿಯ ಸಂಸಾರ ನಡೆಸಿಕೊಂಡು ಸುಂದರಬದುಕನ್ನು ಕಟ್ಟಿಕೊಂಡಿದ್ದಾರೆ. ಇದುವೇ ಮಾಸ್ಟ್ರ ಹೆಗ್ಗಳಿಕೆ.

ಕುಲ ದೇವಳ ಅಭಿವೃದ್ಧಿ..ಕುಲ ಕಸುಬು ಅವನತಿ..    :    

ಹಿಂದೆ ಭಾರತದಲ್ಲಿ ರಾಜ-ರಾಣಿಗೆ ಕೈಮಗ್ಗದ ಬಟ್ಟೆ ತಯಾರು ಮಾಡಿಕೊಟ್ಟಿದ್ದ ರಿಂದ ರಾಜಾಶ್ರಯ ಪಡೆದಿದ್ದರಿಂದ ನಂತರ ಭಾರತದಲ್ಲಿ ಎರಡನೇಯ ದೊಡ್ಡ ಉದ್ದಿಮೆ ನೇಕಾರಿಕೆ ಆಗಿತ್ತು.  ಹಣ ಮಾಡುವ ಉದ್ದೇಶದಿಂದ ನಕಲಿ ಕೈಮಗ್ಗದ ಉತ್ಪನ್ನಗಳು ಅಸಲಿ ಸಾಂಪ್ರದಾಯಿಕ ನೇಕಾರಿಕೆ ಮಾಡುವವರ ಕೈ ಸೇರಿದ್ದರಿಂದ ಕುಲಕಸುಬು ಮಾಡುವವರಿಗೆ ಹೊಡೆತ ಬಿತ್ತು ಬಟ್ಟೆ ಮಿಲ್ನವರು ಪೈಪೋಟಿ ನೀಡಿ ಅತ್ಯಂತ ಕಡಿಮೆ ದರದಲ್ಲಿ ರಂಗುರಂಗನ ಬಟ್ಟೆಗಳನ್ನು ಮಾರುಕಟ್ಟೆಗೆ ಬಿಟ್ಟಾಗ ದುಬಾರಿ ಕೈಮಗ್ಗದ ಬಟ್ಟೆಗಳಿಗೆ ಬೇಡಿಕೆ ಕಡಿಮೆಯಾಯಿತು.  ವಿದ್ಯುತ್ಕೈಮಗ್ಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಂತೆ ಸಾಂಪ್ರದಾಯಿಕ  ಕೈಮಗ್ಗದಿಂದ ಜೀವನ ನಡೆಸುತ್ತಿರುವವರು ಮಗ್ಗದ ವೃತ್ತಿಯಿಂದ ಹಿಂದೆ ಸರಿದರು.       ಸಹಕಾರಿ ಸಂಘಗಳ ಮೂಲಕ ಸರಕಾರವು ನೀಡಿದ ಪ್ರೋತ್ಸಾಹದಿಂದ ಕೈಮಗ್ಗ ಉತ್ಪನ್ನಗಳ ದಾಸ್ತಾನವು ಜಾಸ್ತಿಯಾಗಿ ವ್ಯಾಪಾರದ ಬೇಡಿಕೆ ಕಡಿಮೆಯಾಗಿತ್ತು. ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿಲ್ಲ, ಧಾರಣೆ ಏರುತ್ತಾ ದಿನದ 12 ಗಂಟೆ ಕಷ್ಟಪಟ್ಟು ದುಡಿಮೆ ಮಾಡಿದರೂ ಮತ್ತೆ ತಕ್ಕ ಪ್ರತಿಫಲ ಇಲ್ಲದೆ ಕೈಮಗ್ಗ ನೇಕಾರರಿಗೆ ಸರಕಾರದಿಂದ ನೀಡುವ ಪ್ರೋತ್ಸಾಹ ಏನೇನೂ ಸಾಕಾಗದೇ ನೇಕಾರಿಕೆ ಲಾಭದಾಯಕ ಕೆಲಸ ಅಲ್ಲ ಎಂದು ತಿಳಿದು ತಮ್ಮ ಮಕ್ಕಳನ್ನು ದುಡಿಮೆಗಾಗಿ ಬೇರೆಬೇರೆ ಕ್ಷೇತ್ರಕ್ಕೆ ಕಳುಹಿಸಿದರು ಎಂದು ಹೇಳುವ ಮೇಸ್ಟ್ರು ನಮ್ಮ ನಿತ್ಯ ಜೀವನದಲ್ಲಿ ಸ್ವದೇಶಿ ಕೈಮಗ್ಗ ಉತ್ಪನ್ನಗಳನ್ನು ಬಳಸುವ ಮೂಲಕ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ಆಗಬೇಕು ಎಂಬುವುದು ಅವರ ಅಭಿಪ್ರಾಯ.

ಕರಾವಳಿ ನೇಕಾರ ಪದ್ಮಶಾಲಿಗಳ ಆರಾಧ್ಯ 16 ದೇವಸ್ಥಾನಗಳಲ್ಲಿ ಸಾವಿರಾರು ವಷ೯ಗಳ ಇತಿಹಾಸ ಇರುವುದರಿಂದ ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದಿತ್ತು ನಾನು 75 ವಷ೯ಗಳಿಂದ ಸಕ್ರೀಯನಾಗಿ ನಂಬಿದ ಸಮಾಜ ಭಾಂದವರನ್ನು ಸೇರಿಸಿಕೊಂಡು ಕುಲ ದೇವಸ್ಥಾನದ ಅಭಿವೃದ್ಧಿ ಸಾಧಿಸಿದ್ದೇವೆ.  ಆದರೆ ನೂರಾರು ವಷ೯ಗಳಿಂದ ನಾವು ಬಳಸುವ ಕೈಮಗ್ಗ ಉತ್ಪನ್ನಗಳ ಕುಲ ಕಸುಬು ಅವನತಿಯತ್ತ ಸಾಗುತ್ತಿರುವುದು ಶೋಚನೀಯ.

ಸಂದಶಿ೯ತ ವರದಿ ಸುಧಾಕರವಕ್ವಾಡಿ (ಪತ್ರಕರ್ತರು)

Related Articles

Back to top button