ಶಿಕ್ಷಣ

HOD ನಿಂದಿಸಿ ಬೈದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ?  ಕಾಲೇಜಿನ ವಿರುದ್ಧ ಹೆತ್ತವರ ಆಕ್ರೋಶ

Views: 88

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ HOD ಕಿರುಕುಳಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರೋ ಗಂಭೀರ ಆರೋಪ ಕೇಳಿ ಬಂದಿದೆ. ಫೈನಲ್ ಇಯರ್ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ NTTF NEC ಕಾಲೇಜು ವಿದ್ಯಾರ್ಥಿ ಋಷ್ಯಂತ್ (18) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಋಷ್ಯಂತ್ ಫೈನಲ್ ಇಯರ್ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಓದುತ್ತಿದ್ದ. ಇಂಡಸ್ಟ್ರಿಯಲ್ ಮ್ಯಾನೇಜ್‌ಮೆಂಟ್‌ HOD ಶಿಜುರಿಂದ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. HOD ಶಿಜು ಅವರು ಪ್ರಾಜೆಕ್ಟ್ ವರ್ಕ್‌ಗೆ ಸಂಬಂಧಪಟ್ಟಂತೆ ಋಷ್ಯಂತ್‌ಗೆ ಬೈದಿದ್ದರಂತೆ. ನೀನು ನೋಡವುದಕ್ಕೆ ಶವದ ರೀತಿ ಇದೀಯಾ. ನಿನ್ನ ಪ್ರಾಜೆಕ್ಟ್ ವರ್ಕ್ ಕೂಡ ಹಾಗೆ ಇದೆ ಎಂದಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು ಅಂತ ಕುಟುಂಬಸ್ಥರು ಆಗ್ರಹ ಪಡಿಸಿದ್ದು, ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಋಷ್ಯಂತ್ ಸ್ನೇಹಿತರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

Related Articles

Back to top button