ಕೃಷಿ

ಪಿಎಂ-ಕಿಸಾನ್ ಯೋಜನೆ: ಇಂದು ರೈತರ ಖಾತೆಗೆ 15ನೇ ಕಂತಿನ ಹಣ ಬಿಡುಗಡೆ 

Views: 0

ನವದೆಹಲಿ: ಇಂದು (ನ.15 )ದೇಶದ 8 ಕೋಟಿಗೂ ಅಧಿಕ ಜನರ ಖಾತೆಗೆ ಒಟ್ಟು 18 ಸಾವಿರ ರೂ. ಕೋಟಿ ಬಿಡುಗಡೆ ಆಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಇಂದು ಖುದ್ದಾಗಿ ಈ ಹಣ ಬಿಡುಗಡೆ ಮಾಡಲಿದ್ದಾರೆ.

ಜಾರ್ಖಂಡ್‌ನ ಖುಂಟಿಯ ಬಿರ್ಸಾ ಕಾಲೇಜಿನಲ್ಲಿ ನಾಳೆ ನಡೆಯಲಿರುವ ‘ಬುಡಕಟ್ಟು ಹೆಮ್ಮೆಯ ದಿನ’ದ ಸಂದರ್ಭದಲ್ಲಿ ಅವರು ಪಿಎಂ-ಕಿಸಾನ್ ಯೋಜನೆಯ 15ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಇಂದು ಪ್ರಧಾನಿ ಒಂದು ಬಟನ್ ಕ್ಲಿಕ್ ಮಾಡುತ್ತಿದ್ದಂತೆ 8 ಕೋಟಿಗಿಂತ ಹೆಚ್ಚು ರೈತರು 15ನೇ ಕಂತಿನ ಬಾಬ್ತು ಒಟ್ಟು 18,000 ಕೋಟಿ ರೂ. ಸ್ವೀಕರಿಸಲಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಗಳಲ್ಲಿ ಒಂದಾಗಿದೆ.ಈ ಕಂತಿನ ಬಿಡುಗಡೆಯೊಂದಿಗೆ ಈ ಯೋಜನೆಯ ಪ್ರಾರಂಭದಿಂದ ಇದುವರೆಗೆ ಬಿಡುಗಡೆಯಾದ ಒಟ್ಟು ಮೊತ್ತ 2.8 ಲಕ್ಷ ಕೋಟಿ ರೂ. ಮೊತ್ತವನ್ನು ದಾಟಲಿದೆ

ನಿಗದಿತ ಮಾನದಂಡಕ್ಕೆ ಒಳಪಟ್ಟ ಎಲ್ಲ ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು 2019ರ ಫೆ. 24ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ರೂ. ಆರ್ಥಿಕ ಲಾಭವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೋಡ್ ಮೂಲಕ ದೇಶಾದ್ಯಂತ ರೈತರ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ವರೆಗೆ ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ 2.61 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಪ್ರಯೋಜನ ಈ ಮೂಲಕ ಒದಗಿಸಲಾಗಿದೆ.

Related Articles

Back to top button
error: Content is protected !!