ಸಾಮಾಜಿಕ

ಕಾಂಗ್ರೆಸ್ ನಾಯಕ ಸಚನ್ ಪೈಲಟ್ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾ ಅಬ್ದುಲ್ಲಾ ವಿಚ್ಛೇದನ

Views: 0

ಜೈಪುರ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮತ್ತು ಸಾರಾ ಅಬ್ದುಲ್ಲಾ ಸುಮಾರು 20 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಮುಂಬರುವ ರಾಜಸ್ಥನದ ಚುನಾವಣೆಯಲ್ಲಿ ಸ್ಪರ್ಧಿಸಲು ಪೈಲಟ್ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಅದರಲ್ಲಿ ಅವರ ವಿಚ್ಛೇದನ ನೀಡಿರುವ ವಿಷಯ ಬಹಿರಂಗವಾಗಿದೆ.

ಸಚಿನ್ ಪೈಲಟ್ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (NC) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾ ಅಬ್ದುಲ್ಲಾ ಅವರನ್ನು ಮದುವೆಯಾಗಿದ್ದರು. ಇದೀಗ ದಂಪತಿ ಬೇರ್ಪಟ್ಟಿರುವುದು ಮೊದಲ ಬಾರಿಗೆ ಬಹಿರಂಗವಾಗಿದೆ. ಟೋಂಕ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸಂಗಾತಿಯ ವಿವರವನ್ನು ಕೋರಿದ ಅಂಕಣದಲ್ಲಿ ವಿಚ್ಛೇದಿತ ಎಂದು ಉಲ್ಲೇಖಿಸಿದ್ದಾರೆ.

ಸಚಿನ್ ಪೈಲಟ್ ಮತ್ತು ಸಾರಾ ಅಬ್ದುಲ್ಲಾ 2004 ರಲ್ಲಿ ವಿವಾಹವಾಗಿದ್ದು, ಅವರಿಗೆ ಆರನ್ ಮತ್ತು ವೆಹಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪೈಲಟ್ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಇಬ್ಬರೂ ಪುತ್ರರು ತಮ್ಮ ಅವಲಂಬಿತರು ಎಂದು ಉಲ್ಲೇಖಿಸಿದ್ದಾರೆ.

Related Articles

Back to top button
error: Content is protected !!