ಇತರೆ
ಡಾ.ಎಂ.ಮೋಹನ್ ಆಳ್ವರಿಗೆ ಪಿತೃವಿಯೋಗ

Views: 0
ಮೂಡಬಿದಿರೆ: ಶತಾಯುಷಿ, ಮಿಜಾರುಗುತ್ತು ಆನಂದ ಆಳ್ವ(106 ವ) ಅವರು ಆ.31ರ ಮಂಗಳವಾರ ನಿಧನರಾಗಿದ್ದಾರೆ.
ಆನಂದ ಆಳ್ವ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಆನಂದ ಆಳ್ವ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರ ತಂದೆ. ಅವರು ಮೂವರು ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.






