ಸಿಎಂ ಅಧಿಕಾರ ಹಂಚಿಕೆ: ಸಿದ್ದು- ಡಿಕೆಶಿ ಬಣಗಳ ಅಪಸ್ವರ, ವರಿಷ್ಠರ ಅಂಗಳಕ್ಕೆ

Views: 0
ಅಧಿಕಾರ ಹಂಚಿಕೆ, ಸಿಎಂ ಬದಲಾವಣೆ ವಿಚಾರದಲ್ಲಿ ಸಾಲು ಸಾಲು ಹೇಳಿಕೆ ಬೆನ್ನಲ್ಲೇ ಇದೀಗ ವಿವಾದ ಇತ್ಯರ್ಥಕ್ಕೆ ಹೈಕಮಾಂಡ್ ಬಾಗಿಲು ಬಡಿಯಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಬ್ಬರೂ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾತನಾಡದಿದ್ದರೂ ಬೆಂಬಲಿಗರು ಮಾತ್ರ ಒಂದಿಲ್ಲೊಂದು ಹೇಳಿಕೆ ಮೂಲಕ ವಿವಾದ ಸ್ಪಷ್ಟಿಸುತ್ತಿದ್ದಾರೆ.
ಡಿಕೆಶಿ ಆಪ್ತರು ಎರಡುವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಬದಲಾಗುವುದು ನಿಶ್ಚಿತ ಎನ್ನುತ್ತಿದ್ದಾರೆ.
ಸಿಎಂ ಆಪ್ತರು ಸಿದ್ದರಾಮಯ್ಯ ಅವರು 5 ವರ್ಷ ಮುಂದುವರಿಯಲಿದ್ದಾರೆ ಎನ್ನುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದರಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಕೂಡಲೇ ಹೈಕಮಾಂಡ್ ಮಧ್ಯಪ್ರವೇಶಿಸಬೇಕು ಎನ್ನುವ ಒತ್ತಡವನ್ನು ಹೈಕಮಾಂಡ್ ಮೇಲೆ ಹೇರಲು ತೀರ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಹೈಕಮಾಂಡ್ ಬಳಿ ಎರಡು ಬಣದ ನಾಯಕರು ಪರಸ್ಪರ ದೂರು ನೀಡುವ ಸಾಧ್ಯತೆ ಇದೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಈ ರೀತಿಯ ಗೊಂದಲಕಾರಿ ಹೇಳಿಕೆ ಅನಾವಶ್ಯಕ ಎನ್ನುವ ಮಾತನ್ನು ಸಿದ್ದು ಡಿಕೆಶಿ ಅವರಿಬ್ಬರು ಹೇಳಿದ್ದರು. ಹೇಳಿಕೆಗೆ ಬ್ರೇಕ್ ಬೀಳದಿರುವುದರಿಂದ ಮತ್ತೊಮ್ಮೆ ಹೈಕಮಾಂಡ್ ಕದತಟ್ಟಲು ತೀರ್ಮಾನಿಸಲಾಗಿದೆ.
ಪಕ್ಷಕ್ಕೆ ಡ್ಯಾಮೇಜ್, ಚುನಾವಣೆಗೆ ಸಂಕಷ್ಟ
ಬಣ ರಾಜಕೀಯಕ್ಕಾಗಿ ಈ ರೀತಿ ಪದೇ ಪದೇ ಅಸ್ಥಿರತೆ ಹೇಳಿಕೆಗಳನ್ನು ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಮಸ್ಯೆ ಆಗಲಿದೆ.ಅದರಲ್ಲಿಯೂ ಸಚಿವ ಸ್ಥಾನದಲ್ಲಿರುವ ನಾಯಕರು, ಶಾಸಕರು ಮುಖ್ಯಮಂತ್ರಿ ಬದಲಾಗುತ್ತದೆ. ಎನ್ನುವ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಬಹಿರಂಗ ಹೇಳಿಕೆ ನೀಡಿದಂತೆ ಶಾಸಕರು ಹಾಗೂ ಸಚಿವರಿಗೆ ಸೂಚನೆ ನೀಡಬೇಕು ಎಂದು ಹೈಕಮಾಂಡ್ ಬಳಿ ಕೆಲ ನಾಯಕರು ದೂರು ನೀಡಲು ತೀರ್ಮಾನಿಸಿದ್ದಾರೆ.






