ಇತರೆ
ಕುಂದಾಪುರ: ತೀರ್ಥಯಾತ್ರೆಗೆ ಹೋಗಿದ್ದ ಸಮಯದಲ್ಲಿ ಮನೆ ದೋಚಿದ ಕಳ್ಳರು!

Views: 0
ಕುಂದಾಪುರ: ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಕುರಿತು ವರದಿಯಾಗಿದೆ.
ಸುರೇಶ್ ಎಂಬುವವರು ಆದಿತ್ಯವಾರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆ ಬಾಗಿಲಿಗೆ ಬೀಗವನ್ನು ಹಾಕಿ ಕುಟುಂಬ ಸಮೇತ ಧರ್ಮಸ್ಥಳ, ಸುಬ್ರಹ್ಮಣ್ಯ & ತಲಕಾವೇರಿ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ.
ವಾಪಾಸು ಮನೆಗೆ ಬಂದು ನೋಡುವಾಗ ಮನೆಯ ಬಾಗಿಲಿನ ಎದುರಿಗೆ ಚಿಲಕಕ್ಕೆ ಹಾಕಿದ ಲಾಕ್ ಕಟ್ ಆಗಿದ್ದು. ಮನೆಯ ಒಳಗೆ ಹೋಗಿ ನೋಡಿದಾಗ ಮನೆಯ ಬೆಡ್ ರೂಂನಲ್ಲಿರುವ ಕಪಾಟಿನಲ್ಲಿರುವ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು ಕಳ್ಳರು 2,34,500/- ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






