ಜೆಡಿಎಸ್ ಮೈತ್ರಿಬಳಿಕ ಮೌನಕ್ಕೆ ಜಾರಿದ ವರಿಷ್ಠರು, ಒಟ್ಟಾಗಿ ಕರೆದೊಯ್ಯುವ ನಾಯಕರಿಲ್ಲದ ಬಿಜೆಪಿಯಲ್ಲಿ ನಿರುತ್ಸಾಹ
ರಾಜ್ಯ ಬಿಜೆಪಿ ಸೋಲಿನಿಂದ ಎಚ್ಚೆತ್ತುಕೊಂಡ ರಾಜ್ಯ ನಾಯಕರು ಸರಕಾರದ ವಿರುದ್ಧ ಹೋರಾಟ ಆರಂಭಿಸಿದ್ದರಾದರೂ ನಾಯಕತ್ವದ ಕೊರತೆಯಿಂದ ತಣ್ಣಗಾಗಿದೆ. ಇದೀಗ ಬಿಜೆಪಿ ನಾಯಕರ ಹೇಳಿಕೆ ಕೇವಲ ಮಾಧ್ಯಮ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಸಂಘಟನಾತ್ಮಕವಾಗಿ ಯಾವುದೇ ತೀರ್ಮಾನ ಕೆಲಸಗಳು ಆಗುತ್ತಿಲ್ಲ ಅಲ್ಲಲ್ಲಿ ನಾಯಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

Views: 0
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿಧಾನ ಪರಿಷತ್ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಎಲ್ಲರಿಗಿಂತ ಮುಂಚಿತವಾಗಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಬಿಜೆಪಿ ಮಾತ್ರ ಯಾವುದೇ ತೀರ್ಮಾನ ಕೈಗೊಳ್ಳದೆ ವರಿಷ್ಠರತ್ತ ಮುಖ ಮಾಡಿಕೊಂಡು ಕಾಯುತ್ತಾ ಕುಳಿತಿದ್ದಾರೆ.
ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಿಜೆಪಿ ವರಿಷ್ಠರ ನಿರ್ಧಾರ ಬಳಿಕ ಬಿಜೆಪಿ ಮೌನಕ್ಕೆ ಶರಣಾಗಿದೆ. ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದಾರೆ ಶಾಸಕರನ್ನು, ಕಾರ್ಯಕರ್ತರನ್ನು ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಾಯಕರಿಲ್ಲದೆ ಮತ್ತಷ್ಟು ಮುಜುಗರಕ್ಕೆ ಒಳಗಾಗಿದೆ.
ರಾಜ್ಯ ಬಿಜೆಪಿ ಸೋಲಿನಿಂದ ಎಚ್ಚೆತ್ತುಕೊಂಡ ರಾಜ್ಯ ನಾಯಕರು ಸರಕಾರದ ವಿರುದ್ಧ ಹೋರಾಟ ಆರಂಭಿಸಿದ್ದರಾದರೂ ನಾಯಕತ್ವದ ಕೊರತೆಯಿಂದ ತಣ್ಣಗಾಗಿದೆ. ಇದೀಗ ಬಿಜೆಪಿ ನಾಯಕರ ಹೇಳಿಕೆ ಕೇವಲ ಮಾಧ್ಯಮ ಹೇಳಿಕೆಗಷ್ಟೇ ಸೀಮಿತವಾಗಿದ್ದು, ಸಂಘಟನಾತ್ಮಕವಾಗಿ ಯಾವುದೇ ತೀರ್ಮಾನ ಕೆಲಸಗಳು ಆಗುತ್ತಿಲ್ಲ ಅಲ್ಲಲ್ಲಿ ನಾಯಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಸ್ಥಳೀಯ ಮಟ್ಟದಲ್ಲಿ ಇರುವ ಗೊಂದಲಗಳನ್ನು ಬಗೆಹರಿಸಲು ರಾಜ್ಯನಾಯಕರು ಪ್ರಯತ್ನ ಮಾಡುತ್ತಿಲ್ಲ ಹೀಗಾಗಿ ಜಿಲ್ಲಾ ಮಟ್ಟದಿಂದ ಬೂತ್ ಮಟ್ಟದವರೆಗೂ ಆಂತರಿಕ ಕಚ್ಚಾಟ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಜೆಡಿಎಸ್ ಜೊತೆ ಮೈತ್ರಿ ಅಂತಿಮಗೊಳಿಸಿ ತಿಂಗಳು ಕಳೆದರೂ ಅದರ ಸ್ವರೂಪದ ಬಗ್ಗೆ ರಾಜ್ಯನಾಯಕರೊಂದಿಗೆ ವರಿಷ್ಠರು ಮಾತನಾಡಿಲ್ಲ ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಜೆಡಿಎಸ್ ಜೊತೆ ಮೈತ್ರಿ ರಾಜ್ಯನಾಯಕರ ವಿರೋಧವಿಲ್ಲವಾದರೂ ಮೈತ್ರಿಯ ಬಗ್ಗೆ ಯಾವುದೇ ಸುಳಿವು ನೀಡದೆ ಇನ್ನೂ ಗೌಪ್ಯವಾಗಿ ಇಟ್ಟಿರುವುದೇಕೆ? ಎಂಬುವುದು ರಾಜ್ಯ ನಾಯಕರ ಪ್ರಶ್ನೆಯಾಗಿದೆ.
ಈ ಮಾತನ್ನು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಬಹಿರಂಗವಾಗಿ ಹೇಳಿಕೊಂಡಾಗ ವರಿಷ್ಠರು ಯಾವುದೇ ಗಂಭೀರವಾಗಿ ಪರಿಗಣಿಸಿಲ್ಲ ಆದರೆ, ವರಿಷ್ಠರು ಗೌಡರನ್ನು ದಿಲ್ಲಿಗೆ ಕರೆಸಿ, ತಮ್ಮ ಅಭಿಪ್ರಾಯ ಹೇಳುವಂತೆ ಕೇಳಿಕೊಂಡಿದ್ದರು. ವರಿಷ್ಠರ ಬೇಟಿಗೆ ಗೌಡರು ದಿಲ್ಲಿಗೆ ಹೋದಾಗ ಅವರ ಭೇಟಿಗೂ ಅವಕಾಶ ನೀಡದೆ ವಾಪಸ್ ಆಗಿದ್ದರು. ಇಲ್ಲಿಯೂ ಸಹ ರಾಜ್ಯ ನಾಯಕರಿಗೆ ಇನ್ನಷ್ಟು ಬೇಸರಕ್ಕೆ ಕಾರಣವಾಗಿದೆ.
ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಮತ್ತು ಬಿವೈ ವಿಜಯೇಂದ್ರ ಹೆಸರು ಕೇಳಿ ಬರುತ್ತಿದೆ. ಪ್ರತಿಪಕ್ಷದ ನಾಯಕರಾಗಿ ಬಸವರಾಜ ಬೊಮ್ಮಾಯಿ ನೇಮಕಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಮತ್ತೊಂದೆಡೆ ಶಾಸಕಾಂಗ ಪಕ್ಷದ ನಾಯಕನ ಹೆಸರಿನಲ್ಲೂ ಬದಲಾವಣೆ ಯಾಗುತ್ತದೆ ಎಂದು ಹೇಳಲಾಗಿದೆ.
ಹೀಗಾಗಿ ಶಾಸಕರನ್ನು ಒಟ್ಟಾಗಿ ಕರೆದೊಯ್ಯಲು ನಾಯಕರೇ ಇಲ್ಲದಂತಾಗಿದೆ ಮತ್ತೊಂದೆಡೆ ರಾಜ್ಯಾಧ್ಯಕ್ಷರ ಬದಲಾವಣೆಯ ಗೊಂದಲ ಮುಂದುವರಿದಿದೆ ಈ ಎಲ್ಲಾ ಕಾರಣಗಳಿಂದ ರಾಜ್ಯದ ಎಲ್ಲಾ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಸಂಘಟನಾ ಕಾರ್ಯದಲ್ಲಿ ಯಾರು ಆಸಕ್ತಿ ತೋರಿಸುತ್ತಿಲ್ಲ.






