ಪಿಎಂ ಕಿಸಾನ್ ಸಮ್ಮಾನ್ ನಿಧಿ: ದೀಪಾವಳಿಗೂ ಮುನ್ನ ರೈತರ ಖಾತೆಗೆ 3,000 ರೂಪಾಯಿ!

Views: 0
ನವದೆಹಲಿ: ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರ ಪ್ರಯೋಜನವನ್ನು ಪ್ರಸ್ತುತ ಕೋಟ್ಯಂತರ ರೈತರು ಪಡೆಯುತ್ತಿದ್ದಾರೆ.
ಈ ಯೋಜನೆಯಡಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ತಲಾ 2,000 ರೂ.ಗಳ ಮೂರು ಕಂತುಗಳನ್ನು ಕಳುಹಿಸಲಾಗುತ್ತದೆ. ಅಂದರೆ, ಈ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ.
ಇದುವರೆಗೂ ರೈತರಿಗೆ 14ನೇ ಕಂತಿನ ಹಣ ಬಂದಿದ್ದು, 15ನೇ ಕಂತಿಗಾಗಿ ರೈತ ಬಂಧುಗಳು 3ಸಾವಿರ ರೂಪಾಯಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಹಾಗಾಗಿ ಯಾವುದೇ ವಿಳಂಬವಿಲ್ಲದೆ ಮುಂದಿನ ಕಂತು ಯಾವಾಗ ಬಿಡುಗಡೆಯಾಗುತ್ತದೆ ಎಂದು ತಿಳಿಯೋಣ
ಪಿಎಂ ಕಿಸಾನ್‌ನ 15 ನೇ ಕಂತು ದೀಪಾವಳಿಯ ಮೊದಲು ಬಿಡುಗಡೆಯಾಗಬಹುದು. ಅಂದರೆ ದೀಪಾವಳಿಗೂ ಮುನ್ನ ರೈತರ ಖಾತೆಗೆ 3 ಸಾವಿರ ರೂ.ಬರಲಿದೆ.15ನೇ ಕಂತಿಗೆ 3 ಸಾವಿರ ರೂಪಾಯಿ ಸಿಗುವ ಈಗಾಗಲೇ ಚರ್ಚೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಸರ್ಕಾರ ಇದಕ್ಕಾಗಿ ಸಂಪೂರ್ಣ ಸಿದ್ಧತೆ ನಡೆಸಿದೆ ಮತ್ತು ಈಗ ಯಾವುದೇ ಸಮಯದಲ್ಲಿ ಘೋಷಣೆ ಮಾಡಬಹುದು.
ಆದರೆ, ಕೇಂದ್ರ ಸರ್ಕಾರದಿಂದ ಅಧಿಕೃತವಾದ ಮಾಹಿತಿ ಲಭ್ಯವಾಗಬೇಕಷ್ಟೇ






