ಶೌಚಾಲಯ ಸ್ವಚ್ಛಗೊಳಿಸದಿದ್ದಕ್ಕೆ ಸಿಟ್ಟಾದ ಮುಖ್ಯಶಿಕ್ಷಕ ವಿದ್ಯಾರ್ಥಿನಿಯ ಮೇಲೆ ಆಸಿಡ್
"ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸಿಲ್ಲ ಎಂದು ಸಿಟ್ಟಾದ ಮುಖ್ಯಶಿಕ್ಷಕ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿ ಬೆಚ್ಚಿಬೀಳಿಸೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ"

Views: 0
ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸಿಲ್ಲ ಎಂದು ಕೋಪಗೊಂಡ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯ ಮೇಲೆ ಆಸಿಡ್ ಎರಚಿರುವ ಬೆಚ್ಚಿಬೀಳಿಸುವ ಘಟನೆ ಚಿತ್ರದುರ್ಗ ಜಿಲ್ಲೆಯ ಜೋಡಿಚಿಕ್ಕೇನಹಳ್ಳಿಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಜೋಡಿಚಿಕ್ಕೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತಹಗತಿಯ ಬಾಲಕಿಯೋರ್ವಳಿಗೆ ಶೌಚಾಲಯ ಸ್ವಚ್ಛಗೊಳಿಸುವಂತೆ ಮುಖ್ಯ ಶಿಕ್ಷಕ ರಂಗಸ್ವಾಮಿ ಎಂಬುವರು ಸೂಚಿಸಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿಯ ಸರಿಯಾಗಿ ಶೌಚಾಲಯ ಸ್ವಚ್ಛಗೊಳಿಸದ ಕಾರಣ ಕೋಪಗೊಂಡ ಮುಖ್ಯಶಿಕ್ಷಕ ರಂಗಸ್ವಾಮಿ ಎನ್ನುವವರು ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ ತಂದಿದ್ದ ಆಸಿಡ್ ಅನ್ನೇ ವಿದ್ಯಾರ್ಥಿನಿಯ ಮೇಲೆ ಎರಚಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶೌಚಾಲಯ ಕ್ಲೀನ್ ಮಾಡುವುದಕ್ಕೆ ಬಳಸುವ ಆಸಿಡ್ ಎರಚಿದ ಪರಿಣಾಮ, ವಿದ್ಯಾರ್ಥಿನಿಯ ಬೆನ್ನಿಗೆ ಗಂಭೀರವಾಗಿ ಗಾಯವಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.