ಶಿಕ್ಷಣ

ಕುಂದಾಪುರದ ವರ್ಣಿತಾ.ವಿ ಕುಂದರ್ ಚೆಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Views: 0

ಕುಂದಾಪುರ: ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಚೆಸ್ ಟೂರ್ನಿಯಲ್ಲಿ ವಿಜೇತರಾಗಿರುವ ಕುಂದಾಪುರದ ವರ್ಣಿತಾ ವಿ ಕುಂದರ್ ರಾಷ್ಟ್ರೀಯಮಟ್ಟದ ಚೆಸ್ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ನಗರದ ಶ್ರೀವೆಂಕಟ್ರಮಣ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಭಾರತಿ ಹಾಗೂ ವಿಠಲ್ ಕುಂದರ್ ದಂಪತಿಯ ಪುತ್ರಿ. ಪ್ರತಿಷ್ಠಿತ ಶ್ರೀ ಸಿದ್ಧಿವಿನಾಯಕ ಚೆಸ್ ಆಕಾಡೆಮಿಯ ತರಬೇತುದಾರ ಬಾಬು ಜೆ ಪೂಜಾರಿ ಅವರಿಂದ ತರಬೇತಿ ಪಡೆದುಕೊಂಡಿದ್ದಾರೆ.

ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಾರಿತೋಷಕ ಪಡೆದುಕೊಂಡಿರುವ ವರ್ಣಿತಾ ವಿ ಕುಂದರ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ವಿಜೇತರಾಗಿ ಊರು ಹಾಗೂ ಶಾಲೆಗೆ ಹೆಸರು ತರಲಿ ಎಂದು ಶ್ರೀವೆಂಕಟ್ರಮಣ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಹಾರೈಸಿದ್ದಾರೆ.

Related Articles

Back to top button