ಆರ್ಥಿಕ

ಗ್ರಾಹಕರಿಗೆ LPG ಬೆಲೆ ಏರಿಕೆ ಶಾಕ್​: ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 209 ರೂ. ಏರಿಕೆ

Views: 1

ನವದೆಹಲಿ: ಅಕ್ಟೋಬರ್​ ಆರಂಭದಲ್ಲೇ ಆಯಿಲ್​ ಕಂಪನಿಗಳು ಗ್ರಾಹಕರಿಗೆ ಬೆಲೆ ಏರಿಕೆಯ ಆಘಾತವನ್ನು ನೀಡಿದೆ. ಇಂದಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 209 ರೂಪಾಯಿ ಏರಿಕೆ ಕಂಡಿದೆ

ಬೆಲೆ ಏರಿಕೆಯಿಂದಾಗಿ 19 ಕೆಜಿ ಸಿಲಿಂಡರ್​ ರಾಜಧಾನಿ ದೆಹಲಿಯಲ್ಲಿ 1731.50 ರೂ.ಗೆ ಮಾರಾಟವಾಗಲಿದೆ. ಸೆಪ್ಟೆಂಬರ್​ನಲ್ಲಿ ಈ ಬೆಲೆ 1522.50 ರೂ. ಇತ್ತು. ಮುಂಬೈನಲ್ಲಿ 1482 ರೂ.ನಿಂದ 1684 ರೂ.ಗೆ ಏರಿಕೆಯಾಗಿದೆ. ಕೊಲ್ಕತದಲ್ಲಿ 1636 ರೂ. ನಿಂದ 1839.50 ಹಾಗೂ ಚೆನ್ನೈನಲ್ಲಿ 1695 ರೂ.ನಿಂದ 1898 ರೂ. ವರೆಗೆ ಏರಿಕೆಯಾಗಿದೆ.

ಆದರೆ, 14.20 ಕೆಜಿಯ ಗೃಹಬಳಕೆಯ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೆಪ್ಟೆಂಬರ್​ ತಿಂಗಳ ಆರಂಭದಲ್ಲಿ ಸರ್ಕಾರ ಗೃಹಬಳಕೆಯ ಎಲ್​ಪಿಜಿ ಬೆಲೆಯಲ್ಲಿ 200 ರೂ. ಕಡಿತ ಮಾಡಿದೆ. ಇದರೊಂದಿಗೆ ದೆಹಲಿಯಲ್ಲಿ ಗೃಹ ಬಳಕೆಯ ಎಲ್​ಜಿಪಿ 903 ರೂ. ಕೊಲ್ಕತದಲ್ಲಿ 929, ಮುಂಬೈನಲ್ಲಿ 902.50 ಮತ್ತು ಚೆನ್ನೈನಲ್ಲಿ 918.50 ರೂಪಾಯಿ ಇದೆ.

Related Articles

Back to top button
error: Content is protected !!