ಅಸೋಡು ಶಾಲೆಯಲ್ಲಿ ಮುದ್ದುಕೃಷ್ಣ -ಮುದ್ದು ರಾಧಾ ಸ್ಪರ್ಧೆ: ಪ್ರೊ.ಡಾ.ಅಸೋಡು ಶಾಂತಾರಾಮ್ ಶೆಟ್ಟಿ ಚಾಲನೆ

Views: 0
ಕುಂದಾಪುರ: ಅಸೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮುದ್ದುರಾಧ ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸಲಾಯಿತು.
ಈ ಸ್ಪರ್ಧೆಯಲ್ಲಿ ಅಂಗನವಾಡಿ, ಎಲ್ ಕೆಜಿ, ಯುಕೆಜಿ, ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳು ಮುದ್ದು- ರಾಧಾಕೃಷ್ಣರ ವೇಷವನ್ನು ಧರಿಸಿ ಮನರಂಜನೆ ನೀಡಿದರು.
ಈ ಹಿಂದೆ ಶಾಲೆಯ ದತ್ತು ಸ್ವೀಕಾರ ಮಾಡಿದ್ದ ಪ್ರೊಫೆಸರ್ ಡಾ. ಅಸೋಡು ಅನಂತರಾಮ್ ಶೆಟ್ಟಿ ಅವರು ಕಾರ್ಯಕ್ರಮಕ್ಕೆ. ಚಾಲನೆ ನೀಡಿದರು. ನಂತರ ಅವರು ಮಾತನಾಡಿ,” ಶಿಕ್ಷಣದಿಂದ ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಅರ್ಥ ಮಾಡಿಕೊಂಡು ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.” ಆ ನಿಟ್ಟಿನಲ್ಲಿ ಈ ಗ್ರಾಮೀಣ ಮಟ್ಟದ ಶಾಲೆಯಲ್ಲಿ ಶಿಕ್ಷಣಕ್ಕೆ ವಿದ್ಯಾಭಿಮಾನಿಗಳ ಸಂಪೂರ್ಣ ಪ್ರೋತ್ಸಾಹದಿಂದ ಸೃಜನಶೀಲ, ಪ್ರತಿಭಾವಂತ ವಿದ್ಯಾರ್ಥಿಗಳ ಚಟುವಟಿಕೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ದಯಾನಂದ ಹೆಗ್ಡೆ, ಶಿವಾನಂದ ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗಪ್ಪ ಶೇರಿಗಾರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅರುಣ ರಾಧಾಕೃಷ್ಣ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರ ಪೂಜಾರಿ, ಮುಖ್ಯ ಶಿಕ್ಷಕ ಶಂಕರ್ ಶೆಟ್ಟಿ ಶಾಲಾಭಿವೃದ್ಧಿ ಮಾಜಿ ಅಧ್ಯಕ್ಷ ರಾಮ ಶೆಟ್ಟಿಗಾರ್ ಹೂವಿನ ಕೆರೆ. ಉಪಸ್ಥಿತರಿದ್ದರು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ ಬಹುಮಾನ ವಿತರಿಸಿದರು.
ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕ ಪ್ರತಿನಿಧಿಗಳು, ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.
ಶಾಲೆಯ ಶಿಕ್ಷಕಿಯರು ತೀರ್ಪುಗಾರರಾಗಿ ಭಾಗವಹಿಸಿದ್ದರು.