ರಾಜಕೀಯ
ಉಪ ಚುನಾವಣೆ 2023 ಫಲಿತಾಂಶ | 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಲ್ಲಿ 4ರಲ್ಲಿ ಬಿಜೆಪಿ ಮುನ್ನಡೆ

Views: 0
ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ (ಸೆಪ್ಟೆಂಬರ್ 5) ನಡೆದಿದ್ದ ಉಪ ಚುನಾವಣೆ 2023 ಮತ ಎಣಿಕೆ ಶುಕ್ರವಾರ (ಸೆಪ್ಟೆಂಬರ್ 8) ನಡೆಯುತ್ತಿದ್ದು ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ, ಪಶ್ಚಿಮ ಬಂಗಾಳದ ಧೂಪುರಿ, ಜಾರ್ಖಂಡ್ನ ದುಮ್ಮಿ ಮತ್ತು ತ್ರಿಪುರಾದ ಬಾಕ್ಸಾನಗರ ಮತ್ತು ಧನ್ಪುರ ಸೇರಿ ಏಳು ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ.
ಉತ್ತರಾಖಂಡದ ಬಾಗೇಶ್ವರ್, ತ್ರಿಪುರಾದ ಬಾಕ್ಸಾನಗರ ಮತ್ತು ಧನ್ಪುರ, ಪಶ್ಚಿಮ ಬಂಗಾಳದ ಧೂಪುರಿಯಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕೇರಳದ ಪುತ್ತುಪಲ್ಲಿಯಲ್ಲಿ ಕಾಂಗ್ರೆಸ್, ಉತ್ತರ ಪ್ರದೇಶದ ಘೋಸಿಯಲ್ಲಿ ಎಸ್ಪಿ ಮುನ್ನಡೆಯಲ್ಲಿವೆ.
ಈ ಏಳೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಸವಾಲೊಡ್ಡಿವೆ.






