18ನೇ ‘ಜಿ20’ ಶೃಂಗಸಭೆಗೆ ಸರ್ವ ಸಜ್ಜು

Views: 61
ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಆಯೋಜನೆಗೊಂಡಿರುವ ಸಭೆಗೆ ಆಗಮಿಸಲಿರುವ ಜಾಗತಿಕ ನಾಯಕರ ಸ್ವಾಗತಕ್ಕೆ ದೆಹಲಿ ಸರ್ವಸಜ್ಜಾಗಲಿದೆ.
ಶೃಂಗಸಭೆಗೆ ಎರಡು ದಿನ ಮುಂಚಿತವಾಗಿ ಶುಕ್ರವಾರವೇ ಸದಸ್ಯ ರಾಷ್ಟ್ರಗಳ ಪೈಕಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮೊದಲಾಗಿ ಭಾರತಕ್ಕೆ ಆಗಮಿಸುತ್ತಿದ್ದು, 18ನೇ ಶೃಂಗ ಸಭೆಗೆ ಸರ್ವಾಲಂಕೃತ ರಾಷ್ಟ್ರ ರಾಜಧಾನಿಯಲ್ಲಿ ಕ್ಷಣಗಣನೆ ಶುರುವಾಗಿದೆ.

ಸೆ.8ರಂದು ಪೂರ್ವಭಾವಿಯಾಗಿ ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ದ್ವಿಪಕ್ಷಿಯ ಸಭೆ ನಡೆಸಲಿದ್ದಾರೆ. ರಿಷಿ ಸುನಕ್, ಇಮ್ಯಾನುಯೆಲ್, ಮ್ಯಾಕ್ರೋನ್ ಜಲಾಪ್ ಸ್ಕೋಲ್ ಮತ್ತು ಪೂಮಿಯೊ ಸೇರಿದಂತೆ ಹೆಚ್ಚಿನ ನಾಯಕರು ಸೆ. 8ರ ಸಂಜೆಯೊಳಗೆ ದೆಹಲಿಗೆ ಆಗಮಿಸಲಿದ್ದಾರೆ.
ಸೆ.9 ರಂದು ಪ್ರಗತಿ ಮೈದಾನದಲ್ಲಿ ಅಂದಾಜು 2700 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ‘ಭಾರತ ಮಂಟಪ’ ತಲೆಯೆತ್ತಿ ನಿಂತಿದೆ.
ಆರ್ಥಿಕತೆ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಕುರಿತು ಚರ್ಚೆಗಳನ್ನು ಒಳಗೊಂಡಿರುವ ಸಭೆಗಳು ಮತ್ತು ಚರ್ಚೆಗಳು ಸೆ. 9ರಂದು ನಡೆಯಲಿದೆ.
ಆಫ್ರಿಕನ್ ಯೂನಿಯನ್ ಔಪಚಾರಿಕವಾಗಿ ‘ಜಿ20′ ಗೆ ಸೇರುತ್ತದೆ. ಈ ಕೂಟದ ನಂತರ’ ಜಿ 21′ ಎಂದು ಉಲ್ಲೇಖಿಸಲಾಗುತ್ತದೆ.
ಸೆ.10 ರಂದು ಬೆಳಿಗ್ಗೆ ಮತ್ತೆ ನಾಯಕರ ಸಭೆ ಸೇರಿ ಅಂತಿಮ ಕರಡು ಪ್ರಕಟಿಸಲಾಗುವುದು.
ನಂತರ ‘ಜಿ20’ ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ಹಸ್ತಾಂತರಿಸಲಾಗುವುದು.
ರಷ್ಯಾ ಚೀನಾ ಹೊರತುಪಡಿಸಿ ‘ಜಿ20’ ದೇಶಗಳ ನಾಯಕರುಗಳು ಭಾಗವಹಿಸಲಿದ್ದಾರೆ.








