ಮರವಂತೆಯ ಸಾಧನಾ ಆಶ್ರಯದಲ್ಲಿ ಶಿಕ್ಷಕ ದಿನಾಚರಣೆ, ಸಮ್ಮಾನ

Views: 0
ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾ ಆಶ್ರಯದಲ್ಲಿ ಶನಿವಾರ ಶಿಕ್ಷಕ ದಿನ ಆಚರಿಸಲಾಯಿತು. ಸಾಧನಾ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧನಾ ಸದಸ್ಯರು ಮತ್ತು ಊರಿನ ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು.
ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದವರಲ್ಲಿ ಹಾಜರಿದ್ದ ಶಿಕ್ಷಕರಾದ ಸರ್ವೋತ್ತಮ ಭಟ್, ರಿಚರ್ಡ್ಸ್ ಸಾಲಿನ್ಸ್, ರಮಾನಾಥ, ಶ್ರೀಧರ, ಆಶಾ ನಾಯಕ್, ರಾಮಚಂದ್ರ ದೇವಾಡಿಗ, ಹಿತೇಶ ಶೆಟ್ಟಿ, ದೇವಿದಾಸ ಪೂಜಾರಿ, ಬೀನಾ ನಾಯಕ್, ದ್ವಿತೀಯ ದರ್ಜೆ ಸಹಾಯಕಿ ವಿಶಾಲಾ ಅವರನ್ನು ಸನ್ಮಾನಿಸಲಾಯಿತು.
ಸಾಧನಾ ಅಧ್ಯಕ್ಷ ಜೇಕ್ಸನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಜಿ. ಸೀತಾರಾಮ ಮಡಿವಾಳ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಮರವಂತೆ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಜತೀಂದ್ರ ಮರವಂತೆ ವಂದಿಸಿದರು. ದೇವಿದಾಸ ಶ್ಯಾನುಭಾಗ್ ನಿರೂಪಿಸಿದರು. ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಅವಭೃತ್, ಗಜೇಂದ್ರ ಖಾರ್ವಿ, ಚಂದ್ರಗುಪ್ತ ಖಾರ್ವಿ ವೇದಿಕೆಯಲ್ಲಿದ್ದರು. ಎಲ್ಲ ಶಿಕ್ಷಕರಿಗೆ ಸ್ಮರಣಿಕೆ ವಿತರಿಸಲಾಯಿತು. ಶಿಕ್ಷಕರ ಗೌರವಾರ್ಥ ಭೋಜನ ಕೂಟ ಏರ್ಪಡಿಸಲಾಗಿತ್ತು.