ಕೃಷಿ

ರಾತ್ರೋರಾತ್ರಿ ತಮಿಳುನಾಡಿಗೆ ಕಾವೇರಿ ನೀರು ರೈತ ಸಂಘಟನೆಗಳ ಅಕ್ರೋಶ

Views: 2

ರಾಜ್ಯ ಸರ್ಕಾರ ಮಂಗಳವಾರ ರಾತ್ರಿಯಿಂದಲೇ 5,000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ. ಬುಧವಾರ ರಾತ್ರಿ 8 ಗಂಟೆ ವೇಳೆಗೆ ನದಿ ಹಾಗೂ ನಾಲೆಯಿಂದ ಒಟ್ಟು ರೂ.7,329 ಕ್ಯುಸೆಕ್ ನೀರಿನ ಹೊರಹರಿವು ದಾಖಲಿಸಿದೆ.

ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಈ ನಿರ್ಧಾರ ದಿಂದ ಹಲವು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಕೆಆರ್ ಎಸ್ ಜಲಾಶಯದಲ್ಲಿ ಸದ್ಯ 101.28 ಅಡಿ ನೀರಿದ್ದು, ಪ್ರಸ್ತುತ ಒಳಹರಿವು 2,300 ಕ್ಯುಸೆಕ್ ಇದೆ. ಹೊರಹರಿವು 4,400 ಕ್ಯುಸೆಕ್ ಆಗಿದೆ. ಪ್ರಾಧಿಕಾರದ ಆದೇಶದಂತೆ 15 ದಿನ ತಮಿಳುನಾಡಿಗೆ 5 ಸಾವಿರ ಕ್ಯುಸೆಕ್ ನೀರು ಹರಿಸಿದರೆ ಈ ಭಾಗದ ರೈತರ ಸ್ಥಿತಿ ಚಿಂತಾಜನಕ ವಾಗಲಿದೆ. ಇದಕ್ಕೆ ಜಿಲ್ಲೆಯಲ್ಲಿ ಭಾರಿ ಪ್ರತಿರೋಧದ ಕಿಚ್ಚು ಹೆಚ್ಚಾಗಿದೆ.

ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ಸಂಬಂಧ ವಿಚಾರಣೆ ಮತ್ತು ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಗುರುವಾರ ದಿಲ್ಲಿಗೆ ತೆರಳುವರು.ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾದ ಮಂಡನೆ ಸಂಬಂಧ ವಕೀಲರ ಜೊತೆ ಚರ್ಚಿಸಲಿದ್ದಾರೆ.

Related Articles

Back to top button
error: Content is protected !!