ಇತರೆ

ರಾತ್ರಿ ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಯುವತಿ

Views: 0

ರಾತ್ರಿ ಮಲಗಿದಲ್ಲಿಯೇ ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆ ಯಲ್ಲಿ ಬುಧವಾರ ಸಂಭವಿಸಿದೆ.

ಕಾವಳಪಡೂರು ಗ್ರಾಮದ ಮಧ್ವಗುತ್ತು ರಾಜೀವ ಶೆಟ್ಟಿ ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (19) ಮೃತಪಟ್ಟವರು.

ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದು, ಮಿತ್ರಾ ಅವರು ಬಿ.ಸಿ.ರೋಡ್‌ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಮಧ್ವದಲ್ಲಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜತೆ ವಾಸವಿದ್ದರು.

ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿ ಜತೆ ಮಲಗಿದ್ದರು. ಬೆಳಗ್ಗೆ ಹೊತ್ತು ಕಳೆದರೂ ಏಳದಿರುವುದನ್ನು ಗಮನಿಸಿದ ತಾಯಿ ಎಬ್ಬಿಸುವಾಗ ಅವರು ಮೃತ ಪಟ್ಟಿರುವುದು ತಿಳಿದು ಬಂದಿದೆ.

ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ತಿಳಿಸಿದ್ದಾರೆ.

Related Articles

Back to top button
error: Content is protected !!