ಶಿಕ್ಷಣ
ವಕ್ವಾಡಿ ಸರಕಾರಿ ಶಾಲೆಗೆ LKG, UKG ಗೆ ಮಾನ್ಯತೆ ದೊರಕಿಸಿದ ಶಿಕ್ಷಣ ಸಚಿವರಿಗೆ ಅಭಿನಂದನೆ

Views: 4
ಕುಂದಾಪುರ: ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಗೆ ಸರಕಾರದ ಮಾನ್ಯತೆ ದೊರಕಿಸಿ ಕೊಟ್ಟ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನಕ್ಕೆ ಮನವಿ ನೀಡಲಾಯಿತು.
ನಾಯಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಗ್ರಾಮ ಪಂಚಾಯತ್ ಸದಸ್ಯ ವಕ್ವಾಡಿ ರಮೇಶ್ ಶೆಟ್ಟಿ, ಕೃಷ್ಣ ಪೂಜಾರಿ ಅಮಾಸೆಬೈಲು, ವಿಜಯ ಪೂಜಾರಿ ಹಲ್ತೂರು ಉಪಸ್ಥಿತರಿದ್ದರು.