ಎಲ್ಪಿಜಿ ಸಿಲಿಂಡರ್ ದರ 200 ರೂ ಇಳಿಕೆ; ಕೇಂದ್ರ ಸಂಪುಟದಿಂದ ಅನುಮೋದನೆ

Views: 99
ನವದೆಹಲಿ, ಆಗಸ್ಟ್ 29: ಎಲ್ಪಿಜಿ ಸಿಲಿಂಡರ್ಗಳ ಬೆಲೆ 200 ರೂನಷ್ಟು ಕಡಿಮೆ ಆಗಲಿದೆ 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ 200 ರೂನಷ್ಟು ಸಬ್ಸಿಡಿ ಒದಗಿಸಲು ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ.
ಸದ್ಯ 14 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,100 ರೂ ಅಸುಪಾಸಿನಲ್ಲಿ ಇದೆ. ಇದರ ಬೆಲೆ ಸಾವಿರ ರೂ ಒಳಗೆ ಇರಲಿದೆ ಎನ್ನಲಾಗಿದೆ. ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ರೂಪದಲ್ಲಿ ಬೆಲೆ ಇಳಿಕೆ ಸೌಲಭ್ಯ ಸಿಗಲಿದೆ. ಗ್ಯಾಸ್ ಬೆಲೆ ಕಡಿಮೆ ಆಗಿರುವ ಬಗ್ಗೆ ತೈಲ ಮಾರುಕಟ್ಟೆ ಕಂಪನಿಗಳು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ
ಇದರೊಂದಿಗೆ, ಈ ಸ್ಕೀಮ್ನಲ್ಲಿ 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ ನೀಡಲಾಗುವ ಒಟ್ಟು ಸಬ್ಸಿಡಿ 400 ರೂ ಆಗುತ್ತದೆ.
ಸಬ್ಸಿಡಿರಹಿತ 14 ಕಿಲೋ ಎಲ್ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ 1,105.50 ರೂ ಇದೆ. ಕೋಲ್ಕತಾದಲ್ಲಿ 1,118.50 ರೂ ಇದೆ. ಚೆನ್ನೈನಲ್ಲಿ 1,102.50 ರೂ ಇದೆ.
ಮೇ ತಿಂಗಳಿಂದೀಚೆ ಐಒಸಿ, ಭಾರತ್ ಪೆಟ್ರೋಲಿಯಂ ಮೊದಲಾದ ತೈಲ ಮಾರುಕಟ್ಟೆ ಕಂಪನಿಗಳು ಮೂರು ಬಾರಿ ಎಲ್ಪಿಜಿ ದರಗಳನ್ನು ಏರಿಸಿವೆ.
ಜುಲೈ ತಿಂಗಳಲ್ಲಿ 50 ರೂ ಹೆಚ್ಚಳವಾಗಿತ್ತು. ಈಗ ಉಜ್ವಲ ಸ್ಕೀಮ್ ಅಡಿಯಲ್ಲಿ ಸರ್ಕಾರ 200 ರೂ ಸಬ್ಸಿಡಿ ಘೋಷಿಸಿದೆ.
ಕೇಂದ್ರ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಸ್ಕೀಮ್ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯನ್ನು 200 ರೂನಷ್ಟು ಇಳಿಕೆ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರ






