ರಾಜಕೀಯ

ಬಿಜೆಪಿ ನಾವಿಕನಿಲ್ಲದ ಹಡಗು, ಎಲ್ಲೋ ಕುಳಿತು ರಿಮೋಟ್ ಕಂಟ್ರೋಲ್ ಮಾಡ್ತಾರೆ:ಪಕ್ಷದ ವಿರುದ್ಧ ರೇಣುಕಾಚಾರ್ಯ ಆಕ್ರೋಶ 

Views: 0

 ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸ್ವ ಪಕ್ಷದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಬಿಜೆಪಿ ನಿವಿಕನಿಲ್ಲದ ಹಡಗು, ಇಷ್ಟು ದಿನವಾದರೂ ರಾಜ್ಯಾಧ್ಯಕ್ಷರನ್ನು, ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

 ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಇಷ್ಟು ದಿನವಾದರೂ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ ವಿಪಕ್ಷ ನಾಯಕನನ್ನು ಆಯ್ಕೆಯೂ ಆಗಿಲ್ಲ. ಯಡಿಯೂರಪ್ಪ ಅವರನ್ನು ಕಡೆಗಣೆನೆ ಮಾಡಿದ್ದಾರೆ. ಅವರ ಶಾಪದಿಂದಲೇ ಈ ಸ್ಥಿತಿ ಬಂದಿದೆ ಎಂದು ಆಕ್ರೋಶ ಹೊರಹಾಕಿದರು.

‘ಬಿಜೆಪಿಗೆ ಮೋದಿ ಎಷ್ಟು ಮುಖ್ಯವೋ ರಾಜ್ಯಕ್ಕೆ ಬಿಎಸ್ ಯಡಿಯೂರಪ್ಪ ಅಷ್ಟೇ ಮುಖ್ಯ’ ಕರ್ನಾಟಕ ರಾಜ್ಯವನ್ನು ಎಲ್ಲೋ ಕುಳಿತು ಯಾರೋ  ರಿಮೋಟ್ ಕಂಟ್ರೋಲ್ ಮಾಡ್ತಾ ಇದ್ದಾರೆ ಇದರಿಂದ ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದರು.

ಇದೆ ವೇಳೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ಸಿಗೆ ನನ್ನ ಅವಶ್ಯಕತೆ ಇಲ್ಲ ಸೋತವರನ್ನು ತೆಗೆದುಕೊಂಡು ಏನು ಮಾಡುತ್ತಾರೆ ಅವರು ನನ್ನನ್ನು ಆಹ್ವಾನಿಸಿಲ್ಲ ನಾನು ಅವರ ಹತ್ತಿರ ಕೇಳಿಲ್ಲ ಎಂದರು.

ನಾನು ಲೋಕಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ ನನಗೆ ಟಿಕೆಟ್ ಸಿಗಲಿದೆ ಎಂಬ ನಂಬಿಕೆ ಇದೆ ಪ್ರತಿ ಬೂತ್ ಮಟ್ಟದಲ್ಲಿ ಪ್ರಧಾನ ಮಂತ್ರಿ ಮೋದಿ ಸಾಧನೆಯ ಕರಪತ್ರವನ್ನು ಹಂಚುವ ಕೆಲಸ ಮಾಡಿದ್ದೇನೆ ನಾನು ಮಾಡಿದ ಕೆಲಸವನ್ನು ಯಾರು ಮಾಡಿಲ್ಲ ಎಂದು ಹೇಳಿದರು

Related Articles

Back to top button
error: Content is protected !!