ಮದುವೆ ಮಾಡಿಸಿದ ವ್ಯಕ್ತಿ ಜೊತೆ 25 ವರ್ಷದ ಮಹಿಳೆ ಪರಾರಿ!
Views: 53
ಕನ್ನಡ ಕರಾವಳಿ ಸುದ್ದಿ: ಮದುವೆ ಮಾಡಿಸಿದ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳು ಎಸ್ಕೇಪ್ ಆಗಿರುವ ವಿಚಿತ್ರ ಘಟನೆಯೊಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಸೈಕಲ್ಗಾರ ಓಣಿಯಲ್ಲಿ ಬೆಳಕಿಗೆ ಬಂದಿದೆ.
ಚಾಂದ್ ಸುಲ್ತಾನ ಎಂಬ 25 ವರ್ಷದ ಮಹಿಳೆ, ಜಾಕೀರ್ ಹಬಿಬುಲ್ಲಾ ವೀರಪುರ ಎಂಬ 45 ವರ್ಷದ ವ್ಯಕ್ತಿ ಜೊತೆ ಪರಾರಿಯಾಗಿದ್ದಾಳೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, 2020ರಲ್ಲಿ ದಾದಫೀರ್ ಅನಸರ್ ಅಲಿ ಮುಲ್ಲಾ ಎಂಬಾತ ಚಾಂದ್ ಸುಲ್ತಾನ ಎಂಬಾಕೆಯ ಜೊತೆ ಮದುವೆ ಆಗಿದ್ದರು. ಈ ದಂಪತಿಗೆ ಒಂದು ಗಂಡು ಮಗು ಕೂಡ ಜನಿಸಿತ್ತು.
ದಾದಫೀರ್ ಅನಸರ್ ಅಲಿ ಮುಲ್ಲಾ ಜೊತೆ ಮದುವೆ ಆಗಿ ಮಗು ಜನಿಸಿದ ಮೇಲೂ ತನ್ನ ಹಳೆ ಪ್ರೇಮವನ್ನು ಬಿಡ ಮಹಿಳೆ ಚಾಂದ್ ಸುಲ್ತಾನ, ಇವರ ಮದುವೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಾಕೀರ್ ಹಬಿಬುಲ್ಲಾ ವೀರಪುರ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ವಿಶೇಷವೆಂದರೆ 45 ವರ್ಷದ ಜಾಕೀರ್ ಹಬಿಬುಲ್ಲಾ ವೀರಪುರ, ಚಾಂದ್ ಸುಲ್ತಾನಳಿಗೆ ಸಂಬಂಧದಲ್ಲಿ ಚಿಕ್ಕಪ್ಪನೇ ಆಗಬೇಕು. ಆದರೂ, ತಂದೆ ಮಗಳ ಪವಿತ್ರ ಸಂಬಂಧಕ್ಕೂ ಬೆಲೆ ಕೊಡದ ಈ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು.
ಈ ಬಗ್ಗೆ ಹಿಂದೆಯೂ ಅನುಮಾನಗಳಿತ್ತು. ಇತ್ತೀಚೆಗೆ ಶಾಮಿಯಾನ ಅಂಗಡಿಯಲ್ಲೇ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಂತೆ. ಬಳಿಕ ಹಿರಿಯರು ಬುದ್ಧಿವಾದ ಹೇಳಿ, ಆಕೆಗೆ ಸಂಸಾರ ಸರಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಆದರೂ, ಅಕ್ರಮ ಸಂಬಂಧಕ್ಕೆ ಬ್ರೇಕ್ ಬೀಳಲಿಲ್ಲ. ಬದಲಿಗೆ, ಗಂಡನ ಜೊತೆ ಜಗಳ ಮಾಡಿಕೊಂಡು ತವರು ಮನೆಗೆ ಹೋದ ಚಾಂದ್ ಸುಲ್ತಾನ ಮತ್ತೆ ವಾಪಸ್ ಬರಲೇ ಇಲ್ಲ. ಮತ್ತೊಂದೆಡೆ ಮೊದಲ ಗಂಡನಿಗೆ ಡಿವೋರ್ಸ್ ಸಹ ನೀಡದೆ ಚಾಂದ್ ಸುಲ್ತಾನ ತನ್ನ ಮಗುವನ್ನೂ ಕರೆದುಕೊಂಡು ಜಾಕೀರ್ ಹಬಿಬುಲ್ಲಾ ವೀರಪುರ ಜೊತೆ ಪರಾರಿ ಆಗಿದ್ದಾಳೆ.
ಒಂದೆಡೆ ಮದುವೆ ಮಾಡಿಸಿದವನೇ ಸಂಸಾರಕ್ಕೆ ಕನ್ನ ಹಾಕಿದ್ದರೆ, ಸಂಬಂಧದಲ್ಲಿ ಚಿಕ್ಕಪ್ಪ ಆಗಿರುವ ವ್ಯಕ್ತಿ ಜೊತೆಯಲ್ಲೇ ಆಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮೊದಲ ಗಂಡನಿಗೆ ಕೈಕೊಟ್ಟು ಮಗುವಿನೊಂದಿಗೆ ಜೂಟ್ ಆಗಿದ್ದಾಳೆ. ಮತ್ತೊಂದೆಡೆ, ನಂಬಿಸಿ ಮದುವೆ ಮಾಡಿಸಿದ್ದವನೇ ಈಗ ಪತ್ನಿಯೊಂದಿಗೆ ಪರಾರಿ ಆಗಿದ್ದು, ಪತ್ನಿ, ಮಗು ಕಳೆದುಕೊಂಡು ಕಂಗಾಲಾಗಿದ್ದಾನೆ.
ಈ ವಿಚಿತ್ರ ಘಟನೆಯಿಂದ ಮೊದಲ ಪತಿ ದಾದಫೀರ್ ಅನಸರ್ ಅಲಿ ಮುಲ್ಲಾ ಸಂಸಾರ ಅಲ್ಲೋಲ ಕಲ್ಲೋಲವಾಗಿದೆ. ಈ ರೀತಿ ತನಗೆ ಮೋಸ ಮಾಡಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ದಾದಫೀರ್ ಅನಸರ್ ಅಲಿ ಮುಲ್ಲಾ, ತಮ್ಮ ಹೆಂಡತಿ-ಮಗು ಮರಳಿ ಕೊಡಿಸಿ, ನ್ಯಾಯ ಒದಗಿಸುವಂತೆ ಅಳಲು ತೋಡಿಕೊಂಡಿದ್ದಾರೆ.






