ವಿಚ್ಛೇದನ ಮತ್ತು ದಾಂಪತ್ಯ ಕಲಹ ತಡೆಗಟ್ಟುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮದುವೆಯ ವಿಶೇಷ ಪಾಠ!
Views: 15
ಕನ್ನಡ ಕರಾವಳಿ ಸುದ್ದಿ:ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನಗಳು ಮತ್ತು ದಾಂಪತ್ಯ ಕಲಹಗಳನ್ನು ತಡೆಗಟ್ಟುವ ಉದ್ದೇಶದಿಂದ ಗೋವಾದಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಮದುವೆಯ ಕುರಿತು ವಿಶೇಷ ಪಾಠ ಅಥವಾ ಕೋರ್ಸ್ ಅನ್ನು ಪರಿಚಯಿಸಲಾಗಿದೆ.
ಗೋವಾ ಸರ್ಕಾರವು ಶೀಘ್ರದಲ್ಲೇ ರಾಜ್ಯಾದ್ಯಂತ ಮದುವೆ ಪೂರ್ವ ಕೌನ್ಸೆಲಿಂಗ್ (Pre-marriage counselling) ಕಾರ್ಯಕ್ರಮವನ್ನು ತರಲು ಯೋಜಿಸಿದೆ. ಇದರ ಭಾಗವಾಗಿ ಗೋವಾದ ಕಾಲೇಜೊಂದರಲ್ಲಿ ಯುವಕ-ಯುವತಿಯರಿಗಾಗಿ ವಿಶೇಷ ಕೋರ್ಸ್ ಆರಂಭಿಸಲಾಗಿದೆ.
ಗೋವಾ ಹೋಮ್ ಸೈನ್ಸ್ ಕಾಲೇಜಿನ (Goa College of Home Science) ‘ಹ್ಯೂಮನ್ ಡೆವಲಪ್ಮೆಂಟ್ ಆಂಡ್ ಫ್ಯಾಮಿಲಿ ಸ್ಟಡೀಸ್’ ವಿಭಾಗವು ಈ ಕೋರ್ಸ್ ಅನ್ನು ಸಿದ್ಧಪಡಿಸಿದೆ.
ಕೋರ್ಸ್ ಹೆಸರು: “ಮ್ಯಾರೇಜ್ ರೆಡಿನೆಸ್: ಪ್ರಿಪೇರಿಂಗ್ ಫಾರ್ ಹೆಲ್ದಿ ಆಂಡ್ ಲಾಸ್ಟಿಂಗ್ ರಿಲೇಶನ್ಶಿಪ್ಸ್” (ವಿವಾಹದ ಸಿದ್ಧತೆ: ಆರೋಗ್ಯಕರ ಮತ್ತು ಸುದೀರ್ಘ ಬಾಂಧವ್ಯಕ್ಕಾಗಿ ತಯಾರಿ)
ಅವಧಿ: ಇದು 15 ದಿನಗಳ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, ಡಿಸೆಂಬರ್ 2 ರಿಂದ ಡಿಸೆಂಬರ್ 17, 2026 ರವರೆಗೆ ನಡೆಯಲಿದೆ.
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಮದುವೆಯಾಗದ ಯುವಜನರು ಮತ್ತು ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಲು ಇಷ್ಟಪಡುವ ಯಾರೆಲ್ಲರಿಗೂ ಇದು ಮುಕ್ತವಾಗಿದೆ.
ಪಾಠದಲ್ಲಿ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ?
ಸಾಮಾನ್ಯವಾಗಿ ವೃತ್ತಿ ಜೀವನದ (Career) ತಯಾರಿಗೆ ಜನರು 20 ವರ್ಷಗಳ ಕಾಲ ಓದುತ್ತಾರೆ, ಆದರೆ ಇಡೀ ಜೀವನವನ್ನು ನಿರ್ಧರಿಸುವ ಸಂಸಾರ ಅಥವಾ ಮದುವೆಯ ಬಗ್ಗೆ ಯಾವುದೇ ತಯಾರಿ ಮಾಡಿಕೊಳ್ಳುವುದಿಲ್ಲ ಎಂಬ ಉದ್ದೇಶದಿಂದ ಡೇಟಿಂಗ್ ಮತ್ತು ಅದರ ಉದ್ದೇಶ ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ. ಆತ್ಮಾವಲೋಕನ (Self-Awareness): ಒಬ್ಬ ವ್ಯಕ್ತಿಯಾಗಿ ತನ್ನ ಭಾವನಾತ್ಮಕ ಅಗತ್ಯಗಳನ್ನು ತಿಳಿಯುವುದು. ಸಂಬಂಧಗಳ ಮೇಲೆ ಸ್ತ್ರೀತ್ವ ಮತ್ತು ಪುರುಷತ್ವದ ಪ್ರಭಾವ ಪರಸ್ಪರರ ಭಾವನೆಗಳು ಮತ್ತು ಜವಾಬ್ದಾರಿಗಳನ್ನು ಗೌರವಿಸುವುದು.ಮದುವೆ ಸಂಭ್ರಮ vs ವೈವಾಹಿಕ ಜೀವನ (Wedding vs Marriage): ಕೇವಲ ಒಂದು ದಿನದ ಮದುವೆ ಸಮಾರಂಭಕ್ಕೂ ಮತ್ತು ಜೀವನಪೂರ್ತಿ ನಿಭಾಯಿಸಬೇಕಾದ ದಾಂಪತ್ಯ ಜವಾಬ್ದಾರಿಗೂ ಇರುವ ವ್ಯತ್ಯಾಸವನ್ನು ತಿಳಿಸುವುದು.






