ಯುವಜನ
ಕೆಎಸ್ಸಾರ್ಟಿಸಿ ಬಸ್ ಬೈಕ್ ನಡುವೆ ಅಪಘಾತ: ಕಾಲೇಜಿನ ವಿದ್ಯಾರ್ಥಿನಿ ಸಾವು
Views: 36
ಕನ್ನಡ ಕರಾವಳಿ ಸುದ್ದಿ: ಮೈಸೂರು ನಗರದ ದೊಡ್ಡ ಗಡಿಯಾರ ವೃತದ ಬಳಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಮೃತರನ್ನು ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ವೈಷ್ಣವಿ ಎಂದು ಗುರುತಿಸಲಾಗಿದೆ.
ಎನ್.ಆರ್. ಮೊಹಲ್ಲದ ನಿವಾಸಿ ತಂದೆ ವೆಂಕಟೇಶ್ ಅವರೊಂದಿಗೆ ಕಾಲೇಜಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ವೆಂಕಟೇಶ್ ಅವರಿಗೆ ಕೈ ಮುರಿದಿದದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಹೊರಗಿನಿಂದ ಬಂದ ಛಾಯಾಗ್ರಹಕರು ಡಿಸಿ ಆಫೀಸ್, ಅರಮನೆ, ಮೈಸೂರು ವಿವಿ, ಕುಕ್ಕರಹಳ್ಳಿ ಕೆರೆ ಮುಂತಾದ ಕಡೆ ಪ್ರಿ ವೆಡ್ಡಿಂಗ್ ಶೂಟ್ ಮಾಡುತ್ತಿದ್ದಾರೆ. ಅದನ್ನು ಫೋಟೋ ತೆಗೆಯುವ ಹಾಗೂ ಜೋಡಿಗಳನ್ನು ನೋಡುವ ಬರದಲ್ಲಿ ಅಪಘಾತಗಳಾಗಿ ಸಾವು ನೋವುಗಳು ಸಂಭವಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.






