ಇತರೆ

ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಹರಿದು ರೈತ ಸಾವು: ಹಲವರಿಗೆ ಗಾಯ

Views: 0

ಸಂಗ್ಯೂರ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಟ್ರಾಲಿ ಹರಿದು ರೈತನೊಬ್ಬ ಮೃತಪಟ್ಟಿದ್ದು, ಕನಿಷ್ಠ ಐವರು ಪೊಲೀಸರು ಗಾಯಗೊಂಡ ಘಟನೆ ನಡೆದಿದೆ.

ಜಿಲ್ಲೆಯ ಲಾಂಗೋವಾಲ್ ಪ್ರದೇಶದಲ್ಲಿ ‘ಭೂಮಿ ಉಳಿಸಿ ಅಭಿಯಾನ’ದಡಿ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಪರಿಹಾರ ಕೇಳಲು 16ಕ್ಕೂ ಹೆಚ್ಚು ರೈತರ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದವು.

ಮೃತ ರೈತನನ್ನು ಲಾಂಗೂವಾಲ್ ಪ್ರದೇಶದ ಪ್ರೀತಂ ಸಿಂಗ್ ಎಂದು ಗುರುತಿಸಲಾಗಿದೆ.

ಪ್ರತಿಭಟನೆ ವೇಳೆ ರೈತರು ರಾಷ್ಟ್ರೀಯ ಹೆದ್ದಾರಿ ಮತ್ತು ಟೋಲ್ ಪ್ಲಾಜಾಗಳಿಗೆ ನಿರ್ಬಂಧ ವಿಧಿಸುವುದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೂ ಬ್ಯಾರಿಕೆಡ್ ಗಳ ಮೇಲೆ ಟ್ರ್ಯಾಕ್ಟರ್ ಟ್ರ್ಯಾಲಿ ಮತ್ತು ಬಸ್ ಗಳನ್ನು ಚಲಾಯಿಸಿದ್ದಾರೆ.ಇದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆಲವು ಟ್ರ್ಯಾಕ್ಟರ್ ಮತ್ತು ಬಸ್ ಡ್ರೈವರ್ ಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Related Articles

Back to top button
error: Content is protected !!