ಜನಮನ

ಇಂದು ಕುಂದಾಪುರ, ಬೈಂದೂರು ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

Views: 24

ಕನ್ನಡ ಕರಾವಳಿ ಸುದ್ದಿ:ಕುಂದಾಪುರ ತಲ್ಲೂರು- ಗಂಗೊಳ್ಳಿ ಮುಖ್ಯ ಮಾರ್ಗ, ತಲ್ಲೂರು ಉಪ ಕೇಂದ್ರದ ಮಾರ್ಗ, ನಾವುಂದ ವಿದ್ಯುತ್‌ ಉಪಕೇಂದ್ರ, ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮಾರ್ಗಗಳಲ್ಲಿ ತುರ್ತು, ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಅ.27 ರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಆಗಲಿದೆ.

ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ ನೇರಳಕಟ್ಟೆ ಬಾಂಡ್ಯ, ಸಬ್ಲಾಡಿ, ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ ಹೇರಿಕುದ್ರು, ದೇವಲ್ಕುಂದ, ಕಟ್‌ ಬೇಲ್ತೂರು, ತಲ್ಲೂರು, ಹಟ್ಟಿಯಂಗಡಿ, ಉಪ್ಪಿನಕುದ್ರು, ಕೆಂಚನೂರು, ನೇರಳಕಟ್ಟೆ ಕೆರಾಡಿ, ಬಡಾಕೆರೆ, ಸೇನಾಪುರ, ಹರ್ಕೂರು, ನಾಡ, ನಾರ್ಕಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ಬೈಂದೂರು, ಶಿರೂರು, ಪಡುವರಿ, ಉಪ್ಪುಂದ, ಯಡ್ತರೆ, ಬಿಜೂರು, ತಗ್ಗರ್ಸೆ, ಗಂಗನಾಡು, ಯಳಜಿತ್, ಮುದೂರು, ಕೊಲ್ಲೂರು, ನಾಯ್ಕನಕಟ್ಟೆ ಕೆರ್ಗಾಲ್, ಕಿರಿಮಂಜೇಶ್ವರ, ಮರವಂತೆ, ಹೇರೂರು, ಬೆಳ್ವೆ ಆರ್ಡಿ, ಅಲ್ವಾಡಿ, ಹೆಂಗವಳ್ಳಿ ಗೋಳಿಯಂಗಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು.

Related Articles

Back to top button
error: Content is protected !!