ಇತರೆ

ಹೊಳೆಹೊನ್ನೂರು ; ಗಾಂಧಿ ಪ್ರತಿಮೆ ದ್ವಂಸಗೊಳಿಸಿದ ಕಿಡಿಗೇಡಿಗಳು

Views: 0

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಶಿವಮೊಗ್ಗದ ಹೊಳೆಹೊನ್ನೂರು ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ನಡೆದಿದೆ.

ರವಿವಾರ ತಡರಾತ್ರಿ ಕೃತ್ಯ ನಡೆದಿದ್ದು, ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ದುಷ್ಕೃತ್ಯ ಎಸಗಿದವರ ಪತ್ತೆಗೆ ಬಲೆ ಬೀಸಿದ್ದಾರೆ.

ಇಬ್ಬರು ಬೈಕ್ ನಲ್ಲಿ ಬಂದು ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ಜನರು ಗುಂಪುಗೂಡಿದ್ದು, ಕಿಡಿಗೇಡಿಗಳ ಬಂಧನಕ್ಕೆ ಅಗ್ರಹಿಸಿದ್ದಾರೆ.

ಸರ್ಕಲ್ ನಲ್ಲಿ ಗಾಂಧಿ ಪ್ರತಿಮೆ ಅದರ ಸುತ್ತಲೂ ಮಂಟಪ ರಚಿಸಲಾಗಿದೆ ಮಂಟಪದೊಳಗಿದ್ದ ಗಾಂಧಿ ಪ್ರತಿಮೆಯನ್ನು ದ್ವಂಸ ಮಾಡಲಾಗಿದೆ.

ಕಿಡಿಗೇಡಿಗಳ ಪತ್ತೆಗಾಗಿ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.

Related Articles

Back to top button
error: Content is protected !!