ರಾಜಕೀಯ

ರಾಜಕೀಯ ಮಹತ್ವ ಪಡೆದುಕೊಂಡ ಯತ್ನಾಳ್‌–ವಿಜಯೇಂದ್ರ ಭೇಟಿ!

Views: 27

ಕನ್ನಡ ಕರಾವಳಿ ಸುದ್ದಿ: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಅನಿರೀಕ್ಷಿತವಾಗಿ ಭೇಟಿಯಾದರು..

ರಾಜಕೀಯ ಮಹತ್ವ ಪಡೆದುಕೊಂಡ ಇಬ್ಬರು ನಾಯಕರ ಮುಖಾಮುಖಿ

ಉಭಯ ನಾಯಕರ ಪರಸ್ಪರರ ಮುಖಾಮುಖಿ ಭೇಟಿ ಮತ್ತು ನಡೆದ ಕುಶಲೋಪರಿಯು ಬಿಜೆಪಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಯತ್ನಾಳ್‌ ಅವರು ಈ ಹಿಂದೆ ವಿಜಯೇಂದ್ರ ಅವರ ಪಕ್ಷದ ನಾಯಕತ್ವ ಹಾಗೂ ಕುಟುಂಬ ರಾಜಕಾರಣದ ವಿಚಾರವಾಗಿ ನಿತ್ಯವೂ ಮಾಧ್ಯಮಗಳ ಎದುರು ಟೀಕಾ ಪ್ರಹಾರ ನಡೆಸಿ ಆಕ್ರೋಶ ಹೊರಹಾಕುತ್ತಿದ್ದರು. ಉಭಯ ನಾಯಕರ ನಡುವೆ ಹಲವು ಸಂದರ್ಭಗಳಲ್ಲಿ ವಾಕ್ಸಮರ ನಡೆದಿದೆ. ಹೀಗಾಗಿ, ಭಿನ್ನಾಭಿಪ್ರಾಯದ ನಡುವೆಯೂ ಇಬ್ಬರೂ ಮುಖಾಮುಖಿಯಾಗಿ ಕುಳಿತು ಮಾತುಕತೆ ನಡೆಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಈ ಭೇಟಿಯ ವೇಳೆ ಕೇವಲ ಸೌಜನ್ಯದ ಮಾತುಕತೆ ನಡೆದಿದೆಯೋ ಅಥವಾ ಉಭಯ ನಾಯಕರ ನಡುವಿನ ರಾಜಕೀಯ ಸಂಬಂಧ ಸುಧಾರಿಸುವ ಮುನ್ಸೂಚನೆಯೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿಉತ್ತರ ಸಿಗಬಹುದು. ಈ ಅಚಾನಕ್‌ ಭೇಟಿಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಯತ್ನಾಳ ಬಿಜೆಪಿ ಸೇರ್ಪಡೆಗೆ ಅನಿವಾರ್ಯವಾಗಿದ್ದಾರೆಯೇ ಎಂಬ ಚರ್ಚೆ ಹುಟ್ಟು ಹಾಕಿದೆ.

 

Related Articles

Back to top button
error: Content is protected !!