ಇತರೆ

ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ವ್ಯಕ್ತಿಯ ಶವ ಕುಂದಾಪುರ ಕೋಡಿಯಲ್ಲಿ ಪತ್ತೆ 

Views: 14

ಕನ್ನಡ ಕರಾವಳಿ ಸುದ್ದಿ: ಮಲ್ಪೆ ಬಂದರಿನಿಂದ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಅ.3 ರಂದು ನಾಪತ್ತೆಯಾಗಿದ್ದ ಹೊನ್ನಾವರ ಕರ್ಕೆ ಗ್ರಾಮದ ಪ್ರಮೋದ ವಿದ್ಯಾಧರ ಗೌಡ (53) ಅವರ ಮೃತದೇಹ ಕುಂದಾಪುರದ ಕೋಡಿಯ ಸಮುದ್ರದಲ್ಲಿ ಪತ್ತೆಯಾಗಿದೆ.

ಓಂ ಶ್ರೀ ದತ್ತ ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಮಲ್ಪೆ ಬಂದರಿನಿಂದ ಮೀನು ಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದರು. ಅ.3ರಂದು ನಸುಕಿನ ವೇಳೆ ಪ್ರಮೋದ್ ಗೌಡ ಆಕಸ್ಮಿಕವಾಗಿ ಕಾಲು ಜಾರಿ ಬೋಟಿನಿಂದ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜೆ ಮುಳುಗು ತಜ್ಞರಾದ ದಿನೇಶ್ ಖಾರ್ವಿ ಅವರು ಪ್ರಮೋದ್ ಗೌಡ ಅವರ ಮೃತದೇಹವನ್ನು ಕೋಡಿ ಸಮುದ್ರದಿಂದ ಮೇಲೆತ್ತಲು ನೆರವಾದರು. ಅನಂತರ ಕೋಡಿಯಿಂದ ಆ್ಯಂಬುಲೆನ್ಸ್‌ನಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು.

ಹೊನ್ನಾವರ ಮೂಲದ ಪ್ರಮೋದ್ ಗೌಡ ಅವರು ಸುಮಾರು 20 ವರ್ಷಗಳಿಂದ ಮಲ್ಪೆಯ ಬಂದರಿನಲ್ಲಿ ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದರು. ಪತ್ನಿ ಚಂದ್ರಕಲಾ ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!