ಯುವಜನ

ಲಾಡ್ಜ್‌ ಕೊಠಡಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವತಿ ಸೇರಿ ನಾಲ್ವರು ಪೊಲೀಸರ ವಶಕ್ಕೆ

Views: 65

ಕನ್ನಡ ಕರಾವಳಿ ಸುದ್ದಿ: ಸಾಗರ ಜೋಗ ರಸ್ತೆಯ ಲಾಡ್ಜ್‌ ಒಂದರ ಕೊಠಡಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವತಿ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಐವರ ವಿರುದ್ಧ ಸಾಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಟೋಬರ್ 6 ರಂದು ಮಧ್ಯಾಹ್ನ ಜೋಗ ರಸ್ತೆಯ ಲಾಡ್ಜ್‌ ಒಂದರಲ್ಲಿ ಕೆಲವು ಯುವಕ, ಯುವತಿಯರು ಕೊಠಡಿ ಬಾಡಿಗೆಗೆ ಪಡೆದು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸಾಗರ ಟೌನ್ ಪಿಎಸ್‌ಐ ಶಾಂತರಾಜ್ ಹೆಚ್.ಜಿ. ಅವರ ನೇತೃತ್ವದಲ್ಲಿ ಪೊಲೀಸರು ಲಾಡ್ಜ್‌ಗೆ ತೆರಳಿ ಪರಿಶೀಲನೆ ನಡೆಸಿದ್ದರು.

ಒಂದು ಕೊಠಡಿಯಲ್ಲಿದ್ದ ಮೂವರು ಯುವಕರು ಹಾಗೂ ಒಬ್ಬ ಯುವತಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕೊಠಡಿ ಪರಿಶೀಲಿಸಿದಾಗ ಟೇಬಲ್ ಮೇಲಿದ್ದ ಸಿಗರೇಟ್‌ಗಳನ್ನು ಕಟ್ ಮಾಡಿ, ಅದರೊಳಗಿದ್ದ ತಂಬಾಕನ್ನು ತೆಗೆದು ಗಾಂಜಾ ತುಂಬಿ ಸೇವಿಸುತ್ತಿರುವುದು ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

ಬಳಿಕ ಪೊಲೀಸರು ನಾಲ್ವರನ್ನೂ ಸಾಗರ ಸರ್ಕಾರಿ ಆಸ್ಪತ್ರೆಯಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಗಾಂಜಾ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಲಾಡ್ಜ್‌ನ ಕೊಠಡಿಯಲ್ಲಿದ್ದ ಯುವತಿ, ಮೂವರು ಯುವಕರು ಮತ್ತು ಗಾಂಜಾ ಪೂರೈಸಿದ್ದ ಮತ್ತೊಬ್ಬ ಯುವಕನ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!