ಶಿಕ್ಷಣ

ಕಂಡ್ಲೂರು ರಾಮ್ಸನ್ ಪ್ರೌಢ ಶಾಲೆಗೆ: ಎಲ್ಲಂಗಳ ಅಕಾಡೆಮಿ ಕಂಪ್ಯೂಟರ್ ಕೊಡುಗೆ

Views: 1

ಕುಂದಾಪುರ: “ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಮತ್ತು ಸಮಾಜ ನೆರವಾಗಬೇಕು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಬೆಳೆಯುತ್ತಿವೆ ಮತ್ತು ಸಂಕೀರ್ಣವಾಗುತ್ತಿವೆ. ಸಮಸ್ಯೆಯ ಆಳ ತಿಳಿದು ಸೂಕ್ತ ಮಾರ್ಗದರ್ಶನ ಮಾಡಬೇಕಾಗಿದೆ. ವಿದ್ಯಾರ್ಥಿ ಜೀವನ ಉತ್ಸಾಹ, ಕ್ರಿಯಾಶೀಲತೆ, ಹಾಗೂ ಕಲ್ಪನಾ ಶಕ್ತಿಯ ಆಗರವಾಗಬೇಕು. ಪ್ರೌಢ ಶಿಕ್ಷಣದ ವಯಸ್ಸು ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಂತ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯತತ್ಪರರಾದರೆ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಶ್ರೀ ನವೀನ ಎಲ್ಲಂಗಳ ಮನಶಾಸ್ತಜ್ಞರು ಹಾಗೂ ಅಧ್ಯಕ್ಷರು, ಎಲ್ಲಂಗಳ ಅಕಾಡೆಮಿ ಇವರು ಸಂಸ್ಥೆಗೆ ಕಂಪ್ಯೂಟರ್ ಕೊಡುಗೆ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇದರ ಮಾನ್ಯ ಗೌರವಾಧ್ಯಕ್ಷರು ಶಾಲಾ ಅಭಿವೃದ್ಧಿ ಸಮತಿ ಶ್ರೀ ಸಾಮ್ರಾಟ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಕಂಪ್ಯೂಟರ್ ಕೊಡುಗೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು. ಶ್ರೀ ನವೀನ ಎಲ್ಲಂಗಳ ಇವರು ಸಂಸ್ಥೆಗೆ ಎರಡು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಭಟ್ ಸ್ವೀಕರಿಸಿದರು. ಶ್ರೀ ನವೀನ ಎಲ್ಲಂಗಳ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಿ, ಗೌರವಿಸಿ, ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವಿಜಯ ಪುತ್ರನ್ ಅಧ್ಯಕ್ಷರು ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ರಾಘವೇಂದ್ರ ಶೆಟ್ಟಿ ಕಲ್ಲೋಳಿಮನೆ, ಶ್ರೀ ದಿನೇಶ್ ಆಚಾರ್ಯ ಕಂಡ್ಲೂರು, ಶ್ರೀ ಅಶ್ವಥ್ ಶೆಟ್ಟಿ ಉದ್ಯಮಿಗಳು ಬೆಂಗಳೂರು, ಶ್ರೀ ರಂಜಿತ್ ಕುಮಾರ್ ಶೆಟ್ಟಿ ಹಳೆ ವಿದ್ಯಾರ್ಥಿ ಇವರು ಭಾಗವಹಿಸಿದ್ದರು. ಎಲ್ಲಾ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ರಜನಿ. ಎಸ್. ಹೆಗಡೆ ಸ್ವಾಗತಿಸಿ, ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ರತ್ನ ಸಹ ಶಿಕ್ಷಕರು ಇವರು ವಂದಿಸಿದರು

 

Related Articles

Back to top button