ಇತರೆ

ಕಳವಾಗಿದ್ದ ಶ್ರೀ ದುರ್ಗಾಂಬಾ ಬಸ್ ಮುದರಂಗಡಿ ಸಮೀಪದ ಹಾಡಿಯಲ್ಲಿ ಪತ್ತೆ 

Views: 82

ಕನ್ನಡ ಕರಾವಳಿ ಸುದ್ದಿ: ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಿದ್ದ ವೇಳೆ ಕಳುವಾಗಿದ್ದ ಸುಮಾರು 40 ಲಕ್ಷ ರೂ. ಮೌಲ್ಯದ ಶ್ರೀ ದುರ್ಗಾಂಬಾ ಬಸ್ಸು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಸ್ಸು ಕಳವು ಮಾಡಿದ ಆರೋಪಿಗಳು ಮುದರಂಗಡಿ ಸಮೀಪದ ಮುದ್ದಾಡಿ ಎಂಬಲ್ಲಿನ ಹಾಡಿಯಲ್ಲಿ ಬಿಟ್ಟು ಹೋಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

KA-20-AD-1931 ಸೆಪ್ಟೆಂಬರ್ 28ರಂದು ರಾತ್ರಿ 9.48ರ ಸುಮಾರಿಗೆ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಬಸ್ ನಿರ್ವಾಹಕ ಕೃಷ್ಣ (51) ಅವರು ಚಾಲಕ ರಾಯಿನ್ ಉಚ್ಚಿಲ ಅವರೊಂದಿಗೆ ಸ್ಕೂಟರ್ನಲ್ಲಿ ಅಲ್ಲಿಂದ ತೆರಳಿದ್ದರು.

ಸೆಪ್ಟೆಂಬರ್ 29ರಂದು ಬೆಳಗ್ಗೆ ಬಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಬಸ್ ಕಾಣಿಸದಿರುವುದು ಗಮನಕ್ಕೆ ಬಂದಿದ್ದು, ಅಪರಿಚಿತ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬಸ್ಸು ಕಳವು ಮಾಡಿಕೊಂಡು ಹೋಗಿರುವುದಾಗಿ ಕೃಷ್ಣ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳುವಾದ ಬಸ್ ಹಾಗೂ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ತನಿಖೆಯ ವೇಳೆ, ಸೆಪ್ಟೆಂಬ‌ರ್ 29ರಂದು ಮುಂಜಾನೆ ಸುಮಾರು 2 ಗಂಟೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸ್ಕೂಟರ್ನಲ್ಲಿ ಚಿಟ್ಟಾಡಿಯ ಹನುಮಾನ್ ಗ್ಯಾರೇಜ್‌ ಬಂದಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬಳಿಕ ಅವರು ಬಸ್ಸು ಕಳವು ಮಾಡಿಕೊಂಡು ಹೋಗಿ ಮುದರಂಗಡಿ ಸಮೀಪದ ಮುದ್ದಾಡಿ ಎಂಬಲ್ಲಿನ ಹಾಡಿಯಲ್ಲಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.

Related Articles

Back to top button
error: Content is protected !!