ಮಾಹಿತಿ ತಂತ್ರಜ್ಞಾನ

ವರ್ಕ್ ಫ್ರಮ್ ಹೋಮ್ ಡೇಟಾ ಎಂಟ್ರಿ ಹೆಸರಿನಲ್ಲಿ ಸೈಬರ್ ವಂಚನೆ: 9.33 ಲಕ್ಷ ರೂ.ಕಳೆದುಕೊಂಡ ಯುವತಿ 

Views: 13

ಕನ್ನಡ ಕರಾವಳಿ ಸುದ್ದಿ: ವರ್ಕ್ ಫ್ರಮ್ ಹೋಮ್ ಡಾಟಾ ಎಂಟ್ರಿ ಕೆಲಸದ ನೆಪದಲ್ಲಿ ಅಪರಿಚಿತ ವ್ಯಕ್ತಿಗಳು ಹಂತ ಹಂತವಾಗಿ 9.33 ಲಕ್ಷ ರೂ.ವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ಯುವತಿಗೆ ವಂಚನೆ ಮಾಡಿರುವ ಬಗ್ಗೆ ಸೈಬರ್‌  ಮಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಯುವತಿ ಸೆ.11ರಂದು ಸಾಮಾಜಿಕ ಜಾಲತಾಣ ನೋಡುತ್ತಿದ್ದಾಗ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ ತಾನು ಮೇಘಾ. ಕಂಪೆನಿ ಹೆಡ್ ಆಫೀಸ್ ನ ಎಚ್ ಆರ್ ಎಂದು ಪರಿಚಯಿಸಿಕೊಂಡಿದ್ದಳು. ಕಂಪೆನಿಯಲ್ಲಿ ವರ್ಕ್ ಫ್ರಮ್ ಹೋಮ್ ತಿಳಿಸಿದ್ದಳು. ಡಾಟಾ ಎಂಟ್ರಿ ಕೆಲಸ ಇದೆ ಎಂದು ಅನಂತರ ಒಂದು ಲಿಂಕ್ ನ್ನು ಕಳುಹಿಸಿದ್ದು, ಲಿಂಕ್ ಮೂಲಕ ಯುವತಿ ಲಾಗಿನ್ ಆಗಿದ್ದರು. ಬಳಿಕ ಒಂದು ಐಡಿಯಿಂದ ದೂರುದಾರರ ಐಡಿಗೆ ವರ್ಕ್ ಫ್ರಮ್ ಹೋಮ್ ಬಗ್ಗೆ ಸಂದೇಶ ಬಂದಿತ್ತು. ಅದರಲ್ಲಿ ದಿನಕ್ಕೆ 20 ಟಾಸ್ಕ್ ಗಳನ್ನು ಪೂರ್ತಿಗೊಳಿಸಿದಲ್ಲಿ 200 ರೂ. ದೊರೆಯಲಿದೆ ಎಂದು ನಂಬಿಸಲಾಗಿತ್ತು.

ಅದರಂತೆ ಮೊದಲ ದಿನ 200 ರೂ. ಸಿಕ್ಕಿದೆ. ಮರುದಿನ 13 ಟಾಸ್ಕ್ ಗಳನ್ನು ನೀಡಿದ್ದು ಕಂಪ್ಲೇಟ್ ಮಾಡಲು ಸಾಧ್ಯವಾಗದೆ ಇದ್ದುದರಿಂದ ಬೇರೊಂದು ಐಡಿ ಅದಕ್ಕಾಗಿ ಹೊಂದಿದ್ದ ವ್ಯಕ್ತಿಯೊಂದಿಗೆ ಟಾಸ್ಕ್ ಮುಂದುವರಿಸಿದ್ದಾರೆ. 3,000 ರೂ.ವನ್ನು ಅವರು ಕಳುಹಿಸಿದ ಯೂಸರ್‌ ಐಡಿಗೆ ಕಳುಹಿಸಿದ್ದಾರೆ. ಹೀಗೆ ಟಾಸ್ಕ್ ನೆಪದಲ್ಲಿ ದೂರುದಾರರಿಂದ ಸೆ.12ರಿಂದ ಹಂತವಾಗಿ 17ರ ವರೆಗೆ 9,33,866 ರೂ.ಕಳೆದುಕೊಂಡ ಯುವತಿಗೆ ಮೋಸದ ಬಗ್ಗೆ ತಿಳಿಯಿತು.

ವರ್ಕ್ ಫ್ರಮ್ ಹೋಂ ಎಂಬ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ಆನ್ ಲೈನ್ ಮೂಲಕ ವಂಚನೆ ಮಾಡಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಠಾಣೆಗೆ ನೀಡರುವ ದೂರಿನಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!