ರಾಜಕೀಯ

ಸತತ ಮೂರನೇ ಬಾರಿಗೆ ಮೋದಿಯೇ ಪ್ರಧಾನಿ?

Views: 0

2024 ರ ಚುನಾವಣೆಯಲ್ಲಿ NDA ಜಯ ಸಾಧಿಸಿದ್ದೇ ಆದರೆ ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಬಳಿಕ ಮೂರನೇ ಬಾರಿಗೆ ಆಯ್ಕೆಯಾಗಲಿರುವ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ.

ಆಂಗ್ಲ ಸುದ್ದಿ ವಾಹಿನಿ ‘ಟೈಮ್ಸ್ ನೌ’ ಮತ್ತು ಇಟಿಜಿ ಸಂಸ್ಥೆ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಲೋಕಸಭೆಗೆ ತತ್ ಕ್ಷಣದಲ್ಲಿ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ NDA 300 ಸ್ಥಾನ ಪಡೆದು ಜಯಗಳಿಸಸಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.

ಹೊಸದಾಗಿ ರಚನೆಯಾಗಿರುವ 26 ವಿಪಕ್ಷಗಳ ಒಕ್ಕೂಟ INDIA ಪ್ರಬಲ ಸ್ಪರ್ಧೆ ನೀಡಲಿದೆ NDAಗೆ 300 ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.

ವಿಪಕ್ಷಗಳ ಒಕ್ಕೂಟಕ್ಕೆ 160 ರಿಂದ 190 ಸ್ಥಾನಗಳು ಪ್ರಾಪ್ತವಾಗಲಿದೆ. ಇತರರಿಗೆ 70ರಿಂದ 80 ಸ್ಥಾನಗಳು ಸಿಗಲಿದೆ.

ಹಾಲಿ ಲೋಕಸಭೆಯಲ್ಲಿ NDA 353 ಸದಸ್ಯರ ಬಲವಿದೆ. ಬಿಜೆಪಿಗೆ 288ರಿಂದ 314 ಸ್ಥಾನಗಳು ಸಿಗಲಿದೆ ಕಾಂಗ್ರೆಸ್ ಗೆ 62 ರಿಂದ 80 ಸ್ಥಾನಗಳು ದೊರಕುವ ಸಾಧ್ಯತೆಗಳಿವೆ.

ಮಹಾರಾಷ್ಟ್ರದಲ್ಲಿ NDA 28 ರಿಂದ 32, ವಿಪಕ್ಷಗಳ ಒಕ್ಕೂಟಕ್ಕೆ 15 ರಿಂದ 19 ಸ್ಥಾನಗಳು ಸಿಗಲಿವೆ.

ಬಿಹಾರದಲ್ಲಿ NDAಗೆ 22 ರಿಂದ 24 INDIA 16 ರಿಂದ 18 ಸ್ಥಾನಗಳು ಸಿಗಲಿದೆ ಎಂದು ಸಮೀಕ್ಷೆ ಹೇಳಿದೆ.

ಕೇರಳದಲ್ಲಿ 19 ಸ್ಥಾನ UDFಗೆ, ಒಂದು ಸ್ಥಾನ NDAಗೆ, ತಮಿಳುನಾಡಿನಲ್ಲಿ INDIA 34 ರಿಂದ 39 ಸ್ಥಾನಗಳು,NDA ಗೆ ನಾಲ್ಕರಿಂದ ಎಂಟು ಸ್ಥಾನಗಳು ಸಿಗಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ INDIA ಮೈತ್ರಿಕೂಟಕ್ಕೆ ಎಂಟರಿಂದ ಹತ್ತು ಸ್ಥಾನ, ಬಿಜೆಪಿಗೆ 18ರಿಂದ 20 ಸ್ಥಾನ ಲಭಿಸುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಹೇಳಿದೆ.

Related Articles

Back to top button
error: Content is protected !!