ಯುವಜನ

ಬ್ರಹ್ಮಾವರ: ಓದಲು ಕೋಣೆಗೆ ತೆರಳಿದ ಪಿಯುಸಿ ವಿದ್ಯಾರ್ಥಿ ಮಂಚದ ಕಾಲಿನಡಿ ಮೃತ ಸ್ಥಿತಿಯಲ್ಲಿ ಪತ್ತೆ

Views: 185

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಆಕಾಶವಾಣಿ ಕೇಂದ್ರ ಸಮೀಪದ ಮನೆಯೊಂದರಲ್ಲಿ ಮಂಚದ ಕಾಲನ್ನು ಕುತ್ತಿಗೆಯ ಮೇಲೆ ಇಟ್ಟ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.

ನಿಕ್ಷೇಪ (16) ಮೃತಪಟ್ಟವ. ಈತ ಮಣಿಪಾಲದ ಜ್ಞಾನಸುಧಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದ. ಮೃತ ವಿದ್ಯಾರ್ಥಿಯ ತಂದೆ ಶಿಕ್ಷಕರಾಗಿದ್ದು, ತಾಯಿ ಉಡುಪಿ ಎಸ್‌ಪಿ ಕಚೇರಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.

ಬುಧವಾರ ರಾತ್ರಿ 7ಗಂಟೆ ಸುಮಾರಿಗೆ ಓದುವುದಕ್ಕಾಗಿ ಕೋಣೆಗೆ ತೆರಳಿದ್ದ ಬಾಲಕ ರಾತ್ರಿ 9ರ ಸುಮಾರಿಗೆ ಊಟಕ್ಕೆಂದು ಕರೆದಿದ್ದಾರೆ. ಆದರೆ ಬಾಗಿಲು ತೆಗೆಯದೇ ಇದ್ದಾಗ ನಂತರ ಪಕ್ಕದ ಮನೆಯ ಗಣೇಶ್‌ ಕಾಮತ್‌ ಮತ್ತು ನಿಕ್ಷೇಪನ ತಂದೆಯನ್ನು ಕರೆಯಿಸಿ ರೂಮಿನ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಮಂಚದ ಕಾಲಿನಡಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಕೂಡಲೆ ರಾತ್ರಿ 8:15 ಗಂಟೆಗೆ ಬ್ರಹ್ಮಾವರ ಪ್ರಣವ್‌ ಆಸ್ಪತೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ನಿಕ್ಷೇಪ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಎಫ್.ಎಸ್.ಎಲ್. ವರದಿ ಬಳಿಕ ನಿಧನಕ್ಕೆ ನಿಖರ ಕಾರಣ ತಿಳಿಯಲಿದೆ ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Related Articles

Back to top button
error: Content is protected !!