ಇತರೆ

ನಾಲ್ವರ ಭೀಕರ ಹತ್ಯೆ ಪ್ರಕರಣ: ಆರೋಪಿಗಳು ಅರೆಸ್ಟ್..ಕೊಲೆಯ ಸ್ಫೋಟಕ ರಹಸ್ಯ ಬಯಲು! 

Views: 75

ಕನ್ನಡ ಕರಾವಳಿ ಸುದ್ದಿ: ಬಾಂಗ್ಲಾದೇಶದ ರಂಗ್‌ಪುರ್ ನಗರದಲ್ಲಿ ನಿವೃತ್ತ ಶಾಲಾ ಶಿಕ್ಷಕರೊಬ್ಬರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮನೆಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ.

ಮನೆಯ ಮೇಲ್ಛಾವಣಿಯಲ್ಲಿ ಇಬ್ಬರು ಯಬಾ ಮೆಥಾಂಫೆಟಾಮೈನ್ ಡ್ರಗ್ ಸೇವಿಸುತ್ತಿದ್ದಾಗ ಕುಟುಂಬದ ಸದಸ್ಯರೊಬ್ಬರು ಇದನ್ನು ನೋಡಿದ್ದಾರೆ. ಈ ರಹಸ್ಯ ಹೊರಬೀಳುತ್ತದೆ ಎಂಬ ಭಯದಿಂದ ಇಡೀ ಕುಟುಂಬವನ್ನೇ ಹತ್ಯೆ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಮಾಧ್ಯಮ ವರದಿಗಳು ತಿಳಿಸಿವೆ. ಅಲ್ಲದೆ, ನಾಲ್ವರನ್ನು ಕೊಂದ ಬಳಿಕ ಆರೋಪಿಗಳು ತಕ್ಷಣವೇ ಅಲ್ಲಿಂದ ಪರಾರಿಯಾಗಿಲ್ಲ, ಬದಲಿಗೆ ಸುಮಾರು 6 ರಿಂದ 7 ಗಂಟೆಗಳ ಕಾಲ ಅಲ್ಲೇ ಕುಳಿತು ಖರ್ಜೂರ ಮತ್ತು ಸೌತೆಕಾಯಿಯನ್ನು ತಿಂದಿದ್ದಾರೆ. ನಂತರ ಸ್ನಾನ ಮಾಡಿ ಅಲ್ಲಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.

ರಂಗ್‌ಪುರ್ ಮಹಾನಗರ ಪೊಲೀಸ್, ಅಪರಾಧ ತನಿಖಾ ಇಲಾಖೆ (CID) ಮತ್ತು ಪತ್ತೇದಾರಿ ವಿಭಾಗವೂ ಜಂಟಿಯಾಗಿ ತನಿಖೆ ನಡೆಸಿ, ಮಗ್ಧೋ ಮತ್ತು ಸಿದ್ಧಾರ್ಥ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿವೆ.

ರಂಗ್‌ಪುರ್ ಪೊಲೀಸ್ ಆಯುಕ್ತ ಮೊಹಮ್ಮದ್ ಅಬ್ದುಲ್ ಮಬುದ್ ಅವರ ಪ್ರಕಾರ, ಗುರುವಾರ ರಾತ್ರಿ ಇಬ್ಬರು ಶಂಕಿತರು ನೆರೆಯ ಕಟ್ಟಡದ ಮೇಲ್ಛಾವಣಿಯಿಂದ ಗಣಪತಿ ಅವರ ಮನೆಯ ಮೇಲ್ಛಾವಣಿಗೆ ಬಂದಿದ್ದರು. ಸದ್ದು ಕೇಳಿ ಮೇಲಕ್ಕೆ ಹೋದ ಗಣಪತಿ ಅವರು ಇಬ್ಬರು ಶಂಕಿತರನ್ನು ಪ್ರಶ್ನಿಸಿದರು. ತಾವು ಡ್ರಗ್ಸ್ ಸೇವಿಸಿರುವುದನ್ನು ಕಂಡರೆಂಬ ಭಯದಿಂದ ಗಣಪತಿ ಅವರನ್ನು ಅಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದರು. ಜಗಳದ ಶಬ್ದ ಕೇಳಿ ಬಂದ ಗಣಪತಿ ಅವರ ಪತ್ನಿ ಪ್ರೀತಿಲತಾ ಅವರನ್ನೂ ಅದೇ ರೀತಿಯಲ್ಲಿ ಹತ್ಯೆ ಮಾಡಲಾಯಿತು. ಇದರ ಬೆನ್ನಲ್ಲೇ ಅವರ ಮಗಳು ಅಗಮಿ ಮತ್ತು ಮಗ ಪ್ರಿಯಮ್ ಅವರನ್ನೂ ಕೊಲೆ ಮಾಡಲಾಯಿತು.

ಪ್ರಿಯಮ್ ಅವರು ಶಂಕಿತರಲ್ಲಿ ಒಬ್ಬರ ಪರಿಚಿತರಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಿಯಮ್ ಅವರು ಸಿದ್ಧಾರ್ಥನ ಕಿರಿಯ ಸಹೋದರ ಅಪೋರ್ಕು ಅವರ ಆಪ್ತ ಸ್ನೇಹಿತರಾಗಿದ್ದರು ಮತ್ತು ತಮ್ಮ ಗುರುತು ಪತ್ತೆಯಾಗುತ್ತದೆ ಎಂಬ ಭಯದಿಂದ ಅವರನ್ನು ಕೊಲೆ ಮಾಡಿರಬಹುದು ಎಂದು ತನಿಖಾಧಿಕಾರಿಗಳು ನಂಬಿದ್ದಾರೆ,

Related Articles

Back to top button
error: Content is protected !!