ರಾಜಕೀಯ
ರಾಜ್ಯದಲ್ಲಿ ಬಿಜೆಪಿಯವರದ್ದು ಏನೂ ನಡೆದಿಲ್ಲ, ಮುಂದೆಯೂ ನಡೆಯಲ್ಲ: ಪ್ರಿಯಾಂಕ ಖರ್ಗೆ

Views: 0
ಕರ್ನಾಟಕದಲ್ಲಿ ಬಿಜೆಪಿ ಅವರದ್ದು ಏನು ನಡೆದಿಲ್ಲ, ಮುಂದೆಯೂ ನಡೆಯಲ್ಲ ಇನ್ನು ಆರು ತಿಂಗಳಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ ಎಂದು ಪ್ರಿಯಾಂಕ ಖರ್ಗೆ ಹೇಳಿದರು.
ಅವರು ನಗರದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮಗೂ ರಾಜಕೀಯ ಮಾಡುವುದಕ್ಕೆ ಬರುತ್ತದೆ ಅವರೊಬ್ಬರಿಗೆ ಮಾತ್ರ ಬರುತ್ತದೆಯಾ? ನಮಗೆ ಬರೋದಿಲ್ಲವೇ ? ನಾವು 140 ವರ್ಷಗಳಿಂದ ಪಕ್ಷವನ್ನ ಕಟ್ಟಿಕೊಂಡು ಬರುತ್ತಿದ್ದೇವೆ ಇನ್ನು ಆರು ತಿಂಗಳಲ್ಲಿ ಬಿಜೆಪಿ ಉಳಿಯಲ್ಲ ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಕೇಳಿದರು.
ಎಷ್ಟು ಜನ ನಿಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ ಬಿಜೆಪಿಯವರನ್ನು ಕೇಳಿ ಎಷ್ಟು ಜನ ಅಸಮಾಧಾನದಲ್ಲಿ ಇದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ ಎಂದರು.






