ಇತರೆ
ಬಸ್ ಕಂಡಕ್ಟರ್ ಕೆನ್ನೆಗೆ ಹೊಡೆದು ಕೈ ತಿರುವಿದ ಡ್ರೈವರ್ ಮೇಲೆ ಕೇಸು ದಾಖಲು

Views: 0
ಶಿವಮೊಗ್ಗ KSRTC ಡಿಪೋದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಸ್ ಡ್ರೈವರ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಕೈ ತಿರುವಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಗರಾಜ ನರೇಂದ್ರ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಚಾಲಕ ಪೆದ್ದಣ್ಣ ಬಸ್ಸಿನಲ್ಲಿದ್ದ ಟ್ರೇ ಬಾಕ್ಸ್ ಅನ್ನು ನಿರ್ವಾಹಕನ ಮೇಲೆ ಬಿಸಾಡಿದ್ದಾನೆ. ಇದನ್ನು ಪ್ರಶ್ನಿಸಿದಕ್ಕೆ ಪೆದ್ದಣ್ಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ನಿರ್ವಾಹಕ ನಾಗರಾಜ ನರೇಂದ್ರ ಅವರು ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ ಆಗ ಚಾಲಕ ಪೆದ್ದಣ್ಣ ಕೆಳಗೆ ಬಂದು ನಿರ್ವಾಹಕನಿಗೆ ಹೊಡೆದು ಕೈ ತಿರುವಿದ್ದಾನೆ ಎಂದು ಆರೋಪಿಸಿ, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.






