ಸಾಂಸ್ಕೃತಿಕ

ನಿದ್ರೆಯಲ್ಲಿಯೇ ಇಹಲೋಕ ತ್ಯಜಿಸಿದ ಕಿರಿಯ ವಯಸ್ಸಿನ ಬಾಲಿವುಡ್ ನಟಿ ಅನನ್ಯಾ ರಾಜ್

Views: 56

ಕನ್ನಡ ಕರಾವಳಿ ಸುದ್ದಿ: 7 ಹಾರ್ಸ್ ಟು ಗೋ, ದಿ ಫೈನಲ್ ಎಕ್ಸಿಟ್ ಮತ್ತು ಘೋಸ್ಟ್‌ನಂತಹ ಬಾಲಿವುಡ್ ಚಿತ್ರಗಳಿಗೆ ಹೆಸರುವಾಸಿಯಾದ ನಟಿ ಅನನ್ಯಾ ರಾಜ್ ಅವರು ತಮ್ಮ 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜುಲೈ 15ರಂದು ಅವರು ಇಹಲೋಕ ತ್ಯಜಿಸಿದರು ಎಂದು ಅವರ ಕುಟುಂಬ ತಿಂಗಳ ನಂತರವೇ ತಿಳಿಸಿದೆ.

ಕುಟುಂಬಸ್ಥರು ನಟಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಧನದ ಸಂದರ್ಭಗಳನ್ನು ವಿವರಿಸಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡಿದ ನಂತರ ನಟಿ ಕೊನೆಯುಸಿರೆಳೆದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಅನನ್ಯಾ ರಾಜ್ ಹೆಸರಿನ ಅಧಿಕೃತ ಇನ್ಸ್ಟಾಗ್ರಾಮ್‌ ಖಾತೆಯಿಂದಲೇ ಈ ಪೋಸ್ಟ್ ಶೇರ್ ಆಗಿದೆ. ಇದು ಅನನ್ಯಾ ರಾಜ್ ಅವರ ಕುಟುಂಬ. ಜುಲೈ 15ರ ಮುಂಜಾನೆ ಅನನ್ಯಾ ರಾಜ್ ನಿಧನರಾದರು ಎಂದು ನಾವು ಬಹಳ ನೋವಿನಿಂದ ಘೋಷಿಸಬೇಕಾಗಿದೆ. ಅವರು ನಿದ್ರೆಯಲ್ಲಿಯೇ ಶಾಂತಿಯುತವಾಗಿ ನಿಧನರಾದರು. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರು. ಅವುಗಳನ್ನು ನಿವಾರಿಸಲು ಅವರು ಯೋಧರಂತೆ ಹೋರಾಡಿದರು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆಕೆ ಓರ್ವ ಬಲಿಷ್ಠ ಹುಡುಗಿ. ರಾಣಿಯಂತೆ ಬದುಕಿದ್ದರು. ಮಗು ನಿನ್ನ ಅನುಪಸ್ಥಿತಿ ನಮ್ಮನ್ನು ಕಾಡುತ್ತಿದೆ. ನೀವೆಲ್ಲರೂ ಅವಳ ಆತ್ಮಕ್ಕಾಗಿ ಪ್ರಾರ್ಥಿಸಬೇಕೆಂದು ಒತ್ತಾಯಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಾವು ಗೌಪ್ಯತೆ ಮತ್ತು ಮೌನವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ ಎಂದು ಬರೆದು ಪೋಸ್ಟ್ ಪೂರ್ಣಗೊಳಿಸಿದ್ದಾರೆ. ಅನನ್ಯಾ ರಾಜ್ ಅವರ ಹಠಾತ್ ನಿಧನಕ್ಕೆ ಅನೇಕರು ಆಘಾತದ ಜೊತೆಗೆ ದುಃಖ ವ್ಯಕ್ತಪಡಿಸಿದ್ದಾರೆ.

 

Related Articles

Back to top button
error: Content is protected !!