ಯುವಜನ

ರೀಲ್ಸ್ ನೋಡಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!..ಬೆನ್ನಲ್ಲೇ ಪ್ರಿಯಕರನೂ ನೇಣಿಗೆ ಶರಣು!

Views: 53

ಕನ್ನಡ ಕರಾವಳಿ ಸುದ್ದಿ: ರೀಲ್ಸ್ ನೋಡಬೇಡ, ಓದಿಗೆ ಗಮನ ಕೊಡು ಎಂದು ತಾಯಿ ಬೈದು ಬುದ್ಧಿವಾದ ಹೇಳಿದ್ದರು ಇದರಿಂದ ಮನನೊಂದ ಮೇಘಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ತನ್ನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು, ಆಕೆಯ ಪ್ರಿಯಕರ ತರುಣ್ ಸಾಗರ್ ಕುರಕುರಿ(21) ಸಹ ನೇಣಿಗೆ ಶರಣಾದ ಘಟನೆ ದಾರುಣ ಘಟನೆ ಗುರುವಾರ ಧಾರವಾಡ ತಾಲೂಕಿನ ಕೋಟಬಾಗಿ ಗ್ರಾಮದಲ್ಲಿ ನಡೆದಿದೆ.

ನಗರದ ವಾಚ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ತರುಣ್ ಸಾಗರ್ ಇಂದು ದಾನೇಶ್ವರಿ ನಗರದ ಪಿಜಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತರುಣ್ ಸಾಗರ್ ಪ್ರೇಯಸಿ ಮೇಘಾ ಗುಬ್ಬನ್ನವರ್(20) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು. ಮನೆಯಲ್ಲಿ ಹೆಚ್ಚು ಮೊಬೈಲ್ ಬಳಸುತ್ತಿದ್ದೀಯ ಎಂದು ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಮೇಘಾ ಆತ್ಮಹತ್ಯೆ ಸುದ್ದಿ ಕೇಳಿದ ತರುಣ್ ತನ್ನ ಸ್ನೇಹಿತನ ರೂಮ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತರುಣ್, ಗೆಳೆಯನ ರೂಮ್‌ನಲ್ಲಿ ಬಂದು ತಂಗಿದ್ದ‌. ಕಳೆದ ರಾತ್ರಿ ಗೆಳೆಯನ ಮುಂದೆ ಹುಡುಗಿ ಜೊತೆ ಜಗಳವಾಗಿದೆ, ಆಕೆಯ ಸಹೋದರನಿಗೆ ಈ ವಿಷಯ ಗೊತ್ತಾಗಿದೆ ಎಂದು ಹೇಳಿದ್ದ ಎನ್ನಲಾಗಿದೆ.

ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಹಾಗೂ ತರುಣ್ ಮಧ್ಯೆ ಪ್ರೀತಿ ಇತ್ತು ಎಂಬುದು ಇದೀಗ ಗೊತ್ತಾಗಿದೆ. ಈ‌ ಬಗ್ಗೆ ತರಣ್ ಸಾಗರ್ ಪೋಷಕರಿಗೆ ಕೇಳಿದರೆ ಪ್ರೇಮದ‌ ಬಗ್ಗೆ ಗೊತ್ತಿರಲಿಲ್ಲ. ಬೆಳಗ್ಗೆ ಫೋನ್‌ ಎತ್ತದೇ ಇದ್ದಾಗ ಹುಡುಕಾಟ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

 

Related Articles

Back to top button
error: Content is protected !!