ಸಾಂಸ್ಕೃತಿಕ

ಖ್ಯಾತ ಕಂಟೆಂಟ್ ಕ್ರಿಯೇಟ‌ರ್ ಪತ್ನಿ ರಾತ್ರೋರಾತ್ರಿ ಬಸ್ ಕಂಡಕ್ಟರ್ ಜೊತೆ ಪರಾರಿ

Views: 167

ಕನ್ನಡ ಕರಾವಳಿ ಸುದ್ದಿ: ಖ್ಯಾತ ಕಂಟೆಂಟ್ ಕ್ರಿಯೇಟ‌ರ್ ಹಾಗೂ ಮಾಲಿವುಡ್‌ ನಟನಾಗಿ ಗುರುತಿಸಿಕೊಂಡಿರುವ ಫೇಮಸ್ ಯೂಟ್ಯೂಬ‌ರ್ ಅಖಿಲ್ ಎನ್ ಆರ್ ಡಿ ಅವರ ಪತ್ನಿ ರಾತ್ರೋ ರಾತ್ರಿ ಬಸ್ ಕಂಡಕ್ಟರ್ ಜೊತೆ ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಅಖಿಲ್ ಹಾಗೂ ಮೇಘ ಜೋಡಿ ಕೇರಳ ಕಂಟೆಂಟ್ ಕ್ರಿಯೇಟರ್ಸ್’ಗಳಲ್ಲಿ ಟಾಪ್ ಲಿಸ್ಟ್’ನಲ್ಲಿದ್ದಾರೆ. ಹಲವಾರು ವಿಡಿಯೋ, ಬ್ಲಾಗ್ ಪೋಸ್ಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ಇವರು ಈಗ ಫುಲ್ ಟೈಮ್ ಕಂಟೆಂಟ್‌ ಕ್ರಿಯೇಟರ್ ಆಗಿದ್ದು, ಮೋಜ್ ವೀಡಿಯೊಗಳಂತಹ ಅನೇಕ ವೀಡಿಯೊಗಳೊಂದಿಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದೀಗ ಅಖಿಲ್ ಪತ್ನಿ ಮೇಘ ದಿಢೀರ್ ಆಗಿ ಬಸ್ ಕಂಡೆಕ್ಟರ್ ಜೊತೆ ಓಡಿ ಹೋಗಿದ್ದು, ರಾತ್ರಿ ವೇಳೆ ಲಗೇಜ್ ಹಿಡಿದುಕೊಂಡು ಮನೆಯಿಂದ ಓಡಿ ಹೋಗುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ಮರ್ಚೆಂಟ್ ನೇವಿಯ ಭಾಗವಾಗಿದ್ದ ಅಖಿಲ್ ಅವರ ಬಾಳಿನಲ್ಲಿ ನಡೆದ ಈ ಘಟನೆ ಎಲ್ಲರಿಗೂ ಶಾಕ್ ನೀಡಿದೆ. ಇವರಿಬ್ಬರೂ ನೆರೆಹೊರೆಯವರು ಎನ್ನಲಾಗಿದ್ದು, ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆಂದು ತಿಳಿದು ಬಂದಿದೆ.

ಆದರೆ, ಓಡಿ ಹೋಗಿರುವ ಮೇಘ, ಅಖಿಲ್ ಗೆ ಬೇರೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದ್ದು, ಇದೀಗ ಇಬ್ಬರಿಗೂ ಡಿವೋರ್ಸ್ ಪಡೆಯಬಹುದಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ.

 

Related Articles

Back to top button
error: Content is protected !!